ಬೆಳ್ತಂಗಡಿ:(ಡಿ.12) ಕೊಟ್ಟ ಹಣ ಮರಳಿ ಕೇಳಲು ಹೋದಾತನ ಮೇಲೆ ವ್ಯಕ್ತಿಯೊಬ್ಬ ತಲವಾರಿನಿಂದ ಹಲ್ಲೆ ನಡೆಸಿದ ಘಟನೆ ವೇಣೂರು ಠಾಣಾವ್ಯಾಪ್ತಿಯ ತೆಂಕಕಾರಂದೂರು ಕಟ್ಟೆ ಎಂಬಲ್ಲಿ ನಡೆದಿದೆ.ಹಲ್ಲೆಗೆ ಒಳಗಾಗಿರುವ ದಾವೂದ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.


ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ. ಕಟ್ಟೆ ನಿವಾಸಿ ಇಕ್ಬಾಲ್ ಎಂಬಾತನೇ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.
ಪಡಂಗಡಿ ನಿವಾಸಿ ದಾವೂದ್ ಇಕ್ಬಾಲ್ ಅವರಿಗೆ ರೂ 50ಸಾವಿರ ನೀಡಿದ್ದು ಸದ್ರಿ ಹಣವನ್ನು ಹಿಂತಿರುಗಿಸುವಂತೆ ಕೇಳಲು ಡಿ.11ರಂದು ಸ್ನೇಹಿತರೊಂದಿಗೆ ಇಕ್ಬಾಲ್ ನ ಕಟ್ಟೆಯ ಮನೆಗೆ ಹೋಗಿದ್ದು ಮನೆಯ ಮುಂದಿನಿಂದ ಮೊಬೈಲ್ ಕರೆ ಮಾಡಿ ಹೊರಗೆ ಕರೆದಿದ್ದಾನೆ.


ಈ ವೇಳೆ ಮನೆಯಿಂದ ತಲವಾರಿನೊಂದಿಗೆ ಹೊರ ಬಂದ ಆರೋಪಿ ದಾವೂದ್ ನ ತಲೆಗೆ ಕಡಿದಿರುವುದಾಗಿ ಆರೋಪಿಸಿ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಕಲಂ 109 BNS-2023 ರಂತೆ ಪ್ರಕರಣ ದಾಖಲಿಸಲಾಗಿದೆ.

