Fri. Dec 27th, 2024

Viral News: ಸೆ#ಕ್ಸ್ ಮಾಡಲಿಲ್ಲ, ಆದ್ರೂ ಮಹಿಳಾ ಖೈದಿಯನ್ನು ಗರ್ಭಿಣಿ ಮಾಡಿದ ಖೈದಿ!!?

Viral news: ಲೈಂಗಿಕ ಕ್ರಿಯೆ ಇಲ್ಲದೆ , ಪುರುಷ ಖೈದಿ ಮತ್ತು ಮಹಿಳಾ ಖೈದಿಯ ಸೆಲ್‌ ಬೇರೆ ಬೇರೆ ಇದ್ದರೂ ಇಬ್ಬರು ಸೇರಿ ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್

ಜೋನ್ ಡೆಬಾಸ್ ಮತ್ತು ಡೈಸಿ ಲಿಂಕ್ ಯುಎಸ್‌ಎಯ ಫ್ಲೋರಿಡಾದ ಮಿಯಾಮಿ-ಡೇಡ್ ಕೌಂಟಿ ಜೈಲಿನಲ್ಲಿ ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದಾರೆ. ಇವರಿಬ್ಬರೂ ಒಂದೇ ವಿಭಾಗದ ಅಕ್ಕ ಪಕ್ಕ ಜೈಲಿನಲ್ಲಿದ್ದರು. ಆದರೆ, ಇಬ್ಬರ ನಡುವೆ ಮಗು ಹುಟ್ಟಿ ಆರು ತಿಂಗಳು ಕಳೆದಿವೆ.

ಜೋನ್ ಡೆಬಾಸ್ 23 ವರ್ಷ ವಯಸ್ಸಿನವರು. ಮಹಿಳಾ ಕೈದಿ ಡೈಸಿ ಲಿಂಕ್ 29 ವರ್ಷ. ಇಬ್ಬರನ್ನೂ ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಡೈಸಿ ತನ್ನ ಪತಿಯನ್ನು ಕೊಂದ ಆರೋಪ ಹೊತ್ತಿದ್ದು, 2022 ರಿಂದ ಈ ಜೈಲಿನಲ್ಲಿ ಬಂಧಿಯಾಗಿದ್ದಳು. ಜೈಲಿನಲ್ಲಿರುವ ಎಸಿ ವೆಂಟ್ ಮೂಲಕ ಡೈಸಿ ಮತ್ತು ಜೋನ್ ಮಾತನಾಡುತ್ತಿದ್ದರು.

ಮುಖ್ಯವಾಗಿ ಜೈಲಿನ ಪ್ರತಿ ಸೆಲ್‌ನಲ್ಲಿ ಗಾಳಿಗಾಗಿ ಎಸಿ ವೆಂಟ್ ಅಳವಡಿಸಲಾಗಿದೆ. ಇದು ಎಲ್ಲಾ ಕೋಣೆಗಳಲ್ಲಿ ಇರುತ್ತದೆ ಮತ್ತು ಇದು ಎಲ್ಲಾ ಕೋಣೆಗಳನ್ನು ಸಂಪರ್ಕಿಸುತ್ತದೆ. ಕೊಠಡಿಯಲ್ಲಿನ ಶೌಚಾಲಯದ ಮೇಲೆ ನಿಂತು ಎಸಿ ವೆಂಟ್‌ನ ಮುಂಭಾಗದಲ್ಲಿರುವ ಇತರ ಕೊಠಡಿಯಲ್ಲಿರುವ ಜನರೊಂದಿಗೆ ಮಾತನಾಡಬಹುದು. ಈ ಕಾರಣದಿಂದಾಗಿ, ಡೈಸಿ ಮತ್ತು ಜೋನ್ ಒಂದಾಗಿದ್ದರು.

ಇಬ್ಬರೂ ಎಸಿ ವೆಂಟ್ ಮೂಲಕ ಬಹಳ ಸಮಯದಿಂದ ಮಾತನಾಡುತ್ತಿದ್ದರು ಮತ್ತು ಒಂದು ಹಂತದಲ್ಲಿ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಅಲ್ಲದೆ, ನಾವು ಮಗುವನ್ನು ಹೊಂದಬಹುದೇ ಎಂದು ಜೋನ್ ಕೇಳಿದಾಗ ಡೈಸಿ ಒಪ್ಪುತ್ತಾಳೆ. ಇದಾದ ನಂತರ ಇಬ್ಬರೂ ಮಗುವನ್ನು ಹೊಂದಲು ಯೋಜಿಸಿದ್ದಾರೆ. ಮೊದಲೇ ಹೇಳಿದಂತೆ ಅವರು ಒಬ್ಬರನ್ನೊಬ್ಬರು ಮುಟ್ಟಲಿಲ್ಲ ಅಥವಾ ನೋಡಿಲ್ಲ. ಆದಾಗ್ಯೂ, ಇಬ್ಬರೂ ಒಟ್ಟಿಗೆ ಮಗುವನ್ನು ಹೊಂದಲು ಐಡಿಯಾ ಮಾಡ್ತಾರೆ.

ಜೋನ್ ತನ್ನ ಕೋಣೆಯಲ್ಲಿ ಹಸ್ತಮೈಥುನ ಮಾಡಿಕೊಂಡು ತನ್ನ ವೀರ್ಯವನ್ನು ಸೆರೆನ್ ವ್ರ್ಯಾಪ್‌ನಲ್ಲಿ ಸಿಗರೇಟಿನಂತೆ ಸುತ್ತಿ ಡೈಸಿಯ ಕೋಣೆಗೆ ಎಸಿ ವೆಂಟ್ ಮೂಲಕ ಹಾಕಿದಾಗ ಅದನ್ನು ತೆಗೆದುಕೊಂಡು, ಡೈಸಿ ಅದನ್ನು ತನ್ನ ಜನನಾಂಗಕ್ಕೆ ಚುಚ್ಚಿಕೊಳ್ಳುತ್ತಾಳೆ. ಜೋನ್ ದಿನಕ್ಕೆ 5 ಬಾರಿ ಹಸ್ತಮೈಥುನ ಮಾಡುತ್ತಾನೆ ಮತ್ತು ಡೈಸಿಗೆ ತನ್ನ ವೀರ್ಯವನ್ನು ಕಳುಹಿಸುತ್ತಾನೆ.

ಹೀಗಾಗುವ ಸಾಧ್ಯತೆಗಳು ತೀರಾ ಕಡಿಮೆಯಾದರೂ, ಈ ಮೂಲಕ ಮಗುವನ್ನು ಗರ್ಭಧರಿಸಲು ಸಾಧ್ಯ ಎನ್ನುತ್ತಾರೆ ಮಿಯಾಮಿಯ ವೈದ್ಯಕೀಯ ತಜ್ಞರು. ಇದೆಲ್ಲ ನಡೆದಿರುವುದು ಈ ವರ್ಷದ ಜನವರಿಯಲ್ಲಿ ಎನ್ನಲಾಗಿದೆ. ಜೂನ್ 19 ರಂದು ಅವರಿಗೆ ಒಂದು ಮಗು ಜನಿಸಿತು. ಜೈಲಿನ ಸಮೀಪದಲ್ಲಿರುವ ಆಸ್ಪತ್ರೆಯಲ್ಲಿ ಡೈಸಿ ಹೆರಿಗೆಯಾಗಿದೆ. ಮಗುವನ್ನು ಈಗ ಡೈಸಿಯ ಪೋಷಕರು ಸಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *