Bigg Boss – 11:(ಡಿ.15) ಈ ವಾರ ಗೋಲ್ಡ್ ಸುರೇಶ್ ಕ್ಯಾಪ್ಟನ್ ಆಗಿದ್ದರು. ಅಲ್ಲದೇ, ಅವರಿಗೆ ‘ಉತ್ತಮ’ ಪಟ್ಟ ಕೂಡ ಸಿಕ್ಕಿತ್ತು. ಆದರೆ ಅನಿವಾರ್ಯ ಕಾರಣದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರುವಂತಾಗಿದೆ.
ಇದನ್ನೂ ಓದಿ: ಪೆರಾಜೆ: ಕಾಡು ಪ್ರಾಣಿ ಎಂದು ಭಾವಿಸಿ ಸಾಕು ನಾಯಿಗೆ ಗುಂಡೇಟು!!!
‘ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ.
ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ’ ಎಂದು ಸೂಚನೆ ನೀಡಲಾಗಿದೆ.