ಉಜಿರೆ:(ಡಿ.16) ಉಜಿರೆಯ ನಿನ್ನಿಕಲ್ಲು ರಸ್ತೆಯಲ್ಲಿ ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಡಿ.16 ರಂದು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮೇಲಂತಬೆಟ್ಟು : ಮೇಲಂತಬೆಟ್ಟುವಿನ ನಿವಾಸಿ ದರ್ಶನ್ ಅಸೌಖ್ಯದಿಂದ ನಿಧನ!!
ಮೃತ ವ್ಯಕ್ತಿ ಬೆಳ್ತಂಗಡಿ ನಿವಾಸಿ ಸುಂದರ ಆಚಾರ್ಯ ಎಂದು ತಿಳಿದು ಬಂದಿದೆ.
ಏನಿದು ಘಟನೆ:
ಡಿ.15 ರಂದು ಉಜಿರೆಯಿಂದ ಬೆಳಾಲು ಕಡೆಗೆ ಹೋಗುತ್ತಿದ್ದ ದ್ವಿ ಚಕ್ರ ವಾಹನ ಹಾಗೂ ಬೆಳಾಲು ಕಡೆಯಿಂದ ಉಜಿರೆಗೆ ಹೋಗುತ್ತಿದ್ದ ಕಾರು ನಡುವೆ ನಿನ್ನಿಕಲ್ಲು ಸಮೀಪ ಭೀಕರ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಡಿ.16 ರಂದು ಮೃತಪಟ್ಟಿದ್ದಾರೆ.