ಉಜಿರೆ :(ಡಿ.18) ಇಲ್ಲಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಬದನಾಜೆಯ ಸ್ಮಾರ್ಟ್ ಕ್ಲಾಸ್ ನಿರ್ವಹಿಸುತ್ತಿರುವ ಶಿಕ್ಷಕಿಯ ಒಂದು ವರ್ಷದ ವೇತನಕ್ಕೆ ಅನುಕೂಲವಾಗುವಂತೆ 50,000 ರೂಪಾಯಿಗಳ ಮೊತ್ತದ ಚೆಕ್ಕನ್ನು ಶಾಲಾ ಮುಖ್ಯಶಿಕ್ಷಕಿ ಲಲಿತಾ ಕುಮಾರಿಯವರಿಗೆ
ಇದನ್ನೂ ಓದಿ: Romantic Kiss: ರೊಮ್ಯಾಂಟಿಕ್ ಕಿಸ್ ಮಾಡಲು ಹೋಗಿ ಅನಾರೋಗ್ಯಕ್ಕೀಡಾದ ಯುವತಿ
ವಿಶಾಲ್ ಸೇವಾ ಟ್ರಸ್ಟ್ ಉಜಿರೆ (ರಿ.) ಇದರ ಮ್ಯಾನೇಜಿಂಗ್ ಟ್ರಸ್ಟಿ, ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಲೇರಿಯನ್ ಡಿಸೋಜಾ ಹಸ್ತಾಂತರ ಮಾಡಿದರು.
ದೇಣಿಗೆ ನೀಡಿ ಮಾತನಾಡಿದ ವಲೇರಿಯನ್ ಡಿಸೋಜ ರವರು, ಬದನಾಜೆ ಶಾಲೆಯ ಹಳೆ ವಿದ್ಯಾರ್ಥಿಯಾಗಿ ಶಾಲೆಗೆ ಕೊಡುಗೆ ನೀಡಲು ಬಹಳ ಸಂತೋಷವಾಗುತ್ತಿದೆ. ಈ ದೇಣಿಗೆ ಹಣವು ನನ್ನ ಪತ್ನಿಯ ಪಿಂಚಣಿಯ ಭಾಗವಾಗಿದ್ದು, ಈ ಶಾಲೆಯ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಇಲ್ಲಿಗೆ ಈ ಕೊಡುಗೆ ನೀಡುತ್ತಿದ್ದೇವೆ ಎಂದರು.
ವಿಶಾಲ್ ಸೇವಾ ಟ್ರಸ್ಟ್ ಉಜಿರೆ (ರಿ) ಉಜಿರೆಯ ಶಿಕ್ಷಕ ದಂಪತಿಗಳಾದ ವಲೇರಿಯನ್ ಡಿಸೋಜ ಮತ್ತು ಫ್ಲೋರಿನ್ ಡಿಸೋಜ ರವರು ತಮ್ಮ ಮಗನ ಹೆಸರಿನಲ್ಲಿ ಸ್ಥಾಪನೆ ಮಾಡಿದ್ದು, ಹಲವು ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಮಾಡುತ್ತಿದೆ.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಯಂ.ಸಿ. ಅಧ್ಯಕ್ಷರಾದ ಅನಿಲ್ ಡಿಸೋಜಾ, ಪೋಷಕರು,ಮಾಚಾರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.