ಬಂಟ್ವಾಳ:(ಡಿ.19) ಟೆಂಪೊ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟ ಘಟನೆ ಸೂರಿಕುಮೇರು ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಉಜಿರೆ: ಉಜಿರೆಯ ಶಶಾಂಕ ಹೆಗಡೆ “ವಿದ್ಯಾರತ್ನ ಪ್ರಶಸ್ತಿ” ಗೆ ಆಯ್ಕೆ
ಸುಳ್ಯ ನಿವಾಸಿ ಪುನೀತ್ ( 32) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕೋಸ್ಟಲ್ ಕೋಳಿ ಫಾರ್ಮ್ ಕಂಪೆನಿಯಲ್ಲಿ ಚಾಲಕನಾಗಿರುವ ಈತ ಕೆಲಸ ಮುಗಿಸಿ ಹೋಗುವ ಸಂದರ್ಭದಲ್ಲಿ ಟೆಂಪೋ ಡಿಕ್ಕಿಯಾಗಿದೆ.
ಮಾಣಿಯ ಸೋಷಿಯಲ್ ಇಕ್ವ ಅಂಬ್ಯುಲೆನ್ಸ್ ಮೂಲಕ ಮಂಗಳೂರು ಆಸ್ಪತ್ರೆಗೆ ದಾಖಲಿಸುವ ವೇಳೆ ದಾರಿ ಮಧ್ಯೆ ಈತ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಿಟ್ಲ ಪೋಲಿಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.