ಸಕಲೇಶಪುರ:(ಡಿ.19) ಕಿರಾತಕರು ಕೋಳಿಗಳಿಗೆ ವಿಷ ಇಟ್ಟು ಕೊಂದ ಘಟನೆ ಸಕಲೇಶಪುರದ ಹಾಡಿಗೆ ಗ್ರಾಮದಲ್ಲಿ ನಡೆದಿದೆ. ಅಚ್ಚರಿ ಏನಂದ್ರೆ ಸತ್ತ ಕೋಳಿಯ ಬಾಯಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಇದನ್ನೂ ಓದಿ: Mumbai: ಗೇಟ್ ವೇ ಆಫ್ ಇಂಡಿಯಾದಿಂದ ಹೊರಟ ದೋಣಿಗೆ ನೌಕಾಪಡೆಯ ಬೋಟ್ ಡಿಕ್ಕಿ
ಈ ಘಟನೆ ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ. ಕೋಳಿ ಕಾರ್ಬೈಡ್ ಲೋಹದ ಅಂಶವುಳ್ಳ ರಾಸಾಯನಿಕ ಮಿಶ್ರಣವನ್ನು ಸೇವಿಸಿರುವ ಸಾಧ್ಯತೆಯಿದೆ.
ನೀರಿನ ಜೊತೆ ಮಿಶ್ರಣ ಮಾಡಿ ಕೋಳಿಗೆ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದರ ಪರಿಣಾಮ ಕೋಳಿಯ ಬಾಯಿಯಲ್ಲಿ ಬೆಂಕಿ ಕಾಣಿಸಿಕೊಂಡ ಸಾಧ್ಯತೆಯಿದೆ.
ಅಚ್ಚರಿಯಿಂದ ಗಾಬರಿಗೊಂಡು ಕೋಳಿಗೆ ವಿಷ ಇಟ್ಟವರಿಗೆ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.