Fri. Dec 27th, 2024

Katapady: ಎಸ್‌ ವಿ ಕೆ/ಎಸ್‌ ವಿ ಎಸ್‌ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಪೋಷಕರ ಕ್ರೀಡಾಕೂಟ

ಕಟಪಾಡಿ:(ಡಿ.22) ಇಲ್ಲಿನ ಎಸ್‌ ವಿ ಕೆ/ಎಸ್‌ ವಿ ಎಸ್‌ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರಿಗಾಗಿ ವಿಶೇಷ ಕ್ರೀಡಾಕೂಟವನ್ನು ಆಯೋಜಿಸಲಾಯಿತು.

ಇದನ್ನೂ ಓದಿ: ನೆಲಮಂಗಲ: ತಂದೆಗೆ ಹುಷಾರಿಲ್ಲ ಅಂತ ಕುಟುಂಬ ಸಮೇತ ಊರಿಗೆ ಹೊರಟವರು ಸೇರಿದ್ದು ಮಸಣಕ್ಕೆ!!

ಕಾರ್ಯಕ್ರಮವನ್ನು ಶಾಲೆಯ ಸಂಚಾಲಕರಾದ ಶ್ರೀ ಕೆ. ಸತ್ಯೇಂದ್ರ ಪೈ ದೀಪಪ್ರಜ್ವಲನದ ಮೂಲಕ ಉದ್ಘಾಟಿಸಿ, ಪೋಷಕರ ಮತ್ತು ಶಿಕ್ಷಕರ ನಡುವಿನ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂತಹ ಚಟುವಟಿಕೆಗಳು ಪೂರಕವಾಗುತ್ತವೆ ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸುಮಾರು 150 ಕ್ಕೂ ಹೆಚ್ಚು ಪೋಷಕರು ವಿವಿಧ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಓಟ, ಗುಂಡು ಎಸೆತ, ದಾರಕ್ಕೆ ಸೂಜಿ ಹಾಕುವುದು ಮುಂತಾದ ಸ್ಪರ್ಧೆಗಳು ನಡೆದವು. ಈ ಕಾರ್ಯಕ್ರಮವು ಪೋಷಕರಿಗೆ ಶಾಲೆಯೊಂದಿಗೆ ನಂಟು ಇನ್ನಷ್ಟು ಬಲವಾಗುವಂತೆ ಮಾಡಿತು.

ಪೋಷಕರ ಉತ್ಸಾಹ ಮತ್ತು ಭಾಗವಹಿಸುವಿಕೆ ವಿದ್ಯಾರ್ಥಿಗಳಿಗೆ ಮಾದರಿಯಾಯಿತು. ಆಡಳಿತ ಮಂಡಳಿಯ ಸದಸ್ಯರಾದ ಚಂದ್ರಕಾಂತ್ ಪೈ, ಶ್ರೀನಿವಾಸ್ ಕಿಣಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಮೋಹಿನಿ ಸುರೇಶ್, ಮುಖ್ಯ ಶಿಕ್ಷಕಿ ಶ್ವೇತಾ ಶೆಟ್ಟಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶ್ರೀ ದೇವೇಂದ್ರ ನಾಯಕ್ ಸ್ವಾಗತಿಸಿ ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *