ತುಂಬೆ:(ಡಿ.23) ಇಬ್ಬರು ಯುವತಿಯರನ್ನು ಯುವಕರು ಚುಡಾಯಿಸಿದ ಘಟನೆ ತುಂಬೆಯಲ್ಲಿ ನಡೆದಿದೆ.
ಏನಿದು ಘಟನೆ?
ಇಬ್ಬರು ಯುವತಿಯರು ಸಿನಿಮಾ ನೋಡಲು ಹೋಗಿ, ರಾತ್ರಿ 10 ಗಂಟೆಗೆ ವಾಪಸ್ ತಮ್ಮ ದ್ವಿ- ಚಕ್ರ ವಾಹನದಲ್ಲಿ ಹಿಂತಿರುಗುವಾಗ ತುಂಬೆ ಹತ್ತಿರ ವಾಹನ ನಿಲ್ಲಿಸಿ ಊಟಕ್ಕೆಂದು ಹೋಟೆಲ್ ಗೆ ಹೋಗುತ್ತಾರೆ.
ಅವರು ಊಟ ಮಾಡುವ ಸಮಯದಲ್ಲಿ ಅಲ್ಲಿಗೆ ಇಬ್ಬರು ಯುವಕರು ಬರುತ್ತಾರೆ. ಒಬ್ಬ ಅನ್ಯಕೋಮಿನ ಯುವಕ, ಮತ್ತೊಬ್ಬ ಹಿಂದು ಯುವಕ ಎಂದು ಅಂದಾಜಿಸಲಾಗಿದೆ. ಇಬ್ಬರು ಯುವಕರು ಯುವತಿಯರನ್ನೇ ನುಂಗುವ ತರ ನೋಡುತ್ತಿದ್ದರು.
ಯುವತಿಯರು ಬಿಲ್ ಕೊಟ್ಟು ಬರುವಾಗ , ಆ ಯುವಕರಲ್ಲಿ ಒಬ್ಬ ಮುಸ್ಲಿಂ ಯುವಕ, ಯುವತಿಗೆ ಬರ್ತೀಯಾ ಬರ್ತೀಯಾ ಎರಡು , ಮೂರು ಸಲ ಕೇಳಿದ್ದಾನೆ. ಅದನ್ನು ಲೆಕ್ಕಿಸದೆ ಯುವತಿಯರು ತನ್ನ ದ್ವಿ ಚಕ್ರ ವಾಹನದಲ್ಲಿ ವಾಪಸ್ಸಾಗಿದ್ದಾರೆ.
ಆದ್ರೆ ಆ ಯುವಕರು ಯುವತಿಯರನ್ನು ಬೆಂಬಿಡದೆ ಕಾಡಿದ್ದಾರೆ. ಯುವತಿಯರನ್ನು ತಮ್ಮ ಗಾಡಿಯಲ್ಲಿ ಫಾಲೋ ಮಾಡಿದ್ದಾರೆ. ಫಾಲೋ ಮಾಡಿದ್ದಲ್ಲದೇ ಯುವತಿಯರ ಜೊತೆ ಅನುಚಿತ ವರ್ತನೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಯುವಕ ಕೇಳಿದ್ದಾನೆ. ಆಗ ಆ ಒಬ್ಬ ಯುವತಿ ಅದನ್ನೆಲ್ಲಾ ವೀಡಿಯೋ ಮಾಡಿದ್ದಾಳೆ. ವಿಡಿಯೋ ಮಾಡಿದ್ದನ್ನು ಕಂಡ ಯುವಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ನೆಟ್ಟಿಗರು ಯುವಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.