Tue. Jan 14th, 2025

Udupi: ಪಿಕಪ್-ಕಾರಿನ ನಡುವೆ ಅಪಘಾತ – ಇಬ್ಬರು ವಾಹನ ಚಾಲಕರ ನಡುವೆ ವಾಗ್ವಾದ – ದೂರು ಪ್ರತಿದೂರು

ಉಡುಪಿ:(ಡಿ.26) ಮಾರುತಿ ಸುಜುಕಿ ಸ್ವಿಫ್ಟ್‌ ಕಾರ್‌ ಮತ್ತು ಮಹೀಂದ್ರಾ ಬೊಲೆರೋ ವಾಹನ ನಡುವೆ ಕಲ್ಸಂಕದ ಅಪಘಾತ ನಡೆದಿದ್ದು ನಂತರ ಇಬ್ಬರು ವಾಹನ ಚಾಲಕರ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಸಹಕಾರಿ ಸಂಘದಲ್ಲಿ ನಕಲಿ ಚಿನ್ನದ ಬಳೆ ಅಡವಿಟ್ಟು 2 ಕೋಟಿ ವಂಚಿಸಿದ ಪ್ರಕರಣ.!!

ಅಪಘಾತದಲ್ಲಿ ಕಾರಿನ ಮುಂಭಾಗದ ಬಂಪರ್‌ ಗೆ ಬೊಲೆರೋ ವಾಹನ ಹಿಂದುಗಡೆಯಿಂದ ತಾಗಿಸಿದ ಪರಿಣಾಮ ಕಾರಿನ ಬಂಪರ್‌ ಗೆ ತಾಗಿ ಕಳಚಿದ್ದು ಈ ಕುರಿತು ಪರಸ್ಪರ ವಾಗ್ವಾರ ನಡೆದಿದೆ.

ಇಬ್ಬರೂ ಕೂಡ ದೂರು-ಪ್ರತಿದೂರು ದಾಖಲಿಸಿದ್ದು ಕಾರಿನ ಚಾಲಕ ಅಪಘಾತದ ಬಗ್ಗೆ ಮಾತನಾಡಲು ಹೋದಾಗ ಕಾರಿನ ಚಾಲಕನಿಗೆ ಹಾಗೂ ಕಾರಿನಲ್ಲಿದ್ದ ಹೆಂಡತಿಗೆ ಅವಾಚ್ಯವಾಗಿ ಬೈದಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರೆಮಾಂಕ 226/2024 ಕಲಂ 126(2) 115(2) 352 3(5) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

ಇನ್ನು ಪಿಕಪ್ ಚಾಲಕ ದೂರಿನಲ್ಲಿ ಒಂದು ವಸ್ತುವನ್ನು ಕೈಯಲ್ಲಿ ಹಿಡಿದು ಈಗ ಮಾತನಾಡು ಎಂದು ಕೈಯಲ್ಲಿ ಹಿಡಿದಿದ್ದ ವಸ್ತುವಿನಿಂದ ಬಲಕೆನ್ನೆಗೆ ಹೊಡೆದಿದ್ದು,ನಂತರ ವಾಹನ ಮುಂಭಾಗದ ಗ್ಲಾಸ್‌, ಬೋನೆಟ್‌ ಮತ್ತು ಲೈಟ್ ಗಳನ್ನು ಹೊಡೆದು‌ ಜಕ್ಕಂ ಗೊಳಿಸಿದ್ದು, ಬಳಿಕ ಫಿರ್ಯಾದುದಾರರ ಬಳಿ ಪುನಃ ಬಂದು ಕೈಯಿಂದ ಕೆನ್ನೆಗೆ ಬಲವಾಗಿ ಹೊಡೆದಿರುತ್ತಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರೆಮಾಂಕ: 225/2024 ಕಲಂ 115(2) 118(1) 352 324(4) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *