Fri. Dec 27th, 2024

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಯುವಕರು – ಇಬ್ಬರು ಪೋಲಿಸರ ವಶಕ್ಕೆ.!!!

ಮಂಗಳೂರು:(ಡಿ.27) ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಮಹಿಳೆಯೊಬ್ಬರನ್ನು ಇಬ್ಬರು ಯುವಕರು ಕಾರಿನಲ್ಲಿ ಹಿಂಬಾಲಿಸಿ ಬೆದರಿಸಿ,

ಇದನ್ನೂ ಓದಿ: ರೆಖ್ಯ : ಡಿ.27 ರಂದು ಸ. ಹಿ. ಪ್ರಾ. ಶಾಲೆಯಲ್ಲಿ ನಡೆಯಬೇಕಿದ್ದ ಚಿಣ್ಣರ ಕಲರವ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಮುಂದೂಡಿಕೆ

ಭಯ ಹುಟ್ಟಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗೀಶ್ ಮತ್ತು ಸಿಂಚನ್ ಕುಂದರ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಟ್ಸಾಪ್ ಪರಿಶೀಲನೆ ನಡೆಸಿದಾಗ ಮಹಿಳೆಯ ಗಂಡ ಎಡ್ಕಂಡ್ ಫೆರ್ನಾಂಡಿಸ್, ಆರೋಪಿಗಳಲ್ಲಿ ಓರ್ವನಾಗಿರುವ ಯೋಗೀಶ್‌ನ ಜತೆ ನಡೆಸಿರುವ ಚಾಟಿಂಗ್ ಕೂಡಾ ಪತ್ತೆಯಾಗಿದೆ.

ಅದರಲ್ಲಿ ಆತನಿಗೆ ಹಣ ಪಾವತಿ ಮಾಡಿರುವುದು, ಹಿಂಬಾಲಿಸಿಕೊಂಡು ಹೋಗುವಂತೆ ಸೂಚಿಸಿರುವ ಮಾಹಿತಿಗಳು ಕೂಡಾ ಪೊಲೀಸರಿಗೆ ಲಭ್ಯವಾಗಿದೆ. ಬಂದರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅವರ ಮೊಬೈಲ್ ಪರಿಶೀಲನೆ ನಡೆಸಿದಾಗ ಮಹಿಳೆಯಿದ್ದ ಆಟೋವನ್ನು ಹಿಂಬಾಲಿಸಿಕೊಂಡು ಹೋಗುವಾಗ ತೆಗೆದ ಫೋಟೋಗಳು,

ಮಹಿಳೆ ಕೋರ್ಟ್ನಲ್ಲಿ ಇದ್ದಾಗ ತೆಗೆದ ಫೋಟೋಗಳು ಸೇರಿದಂತೆ ಮಹಿಳೆಗೆ ಸಂಬಂಧಿಸಿದ ಇತರ ಫೋಟೋಗಳು, ವೀಡಿಯೋಗಳು ಪತ್ತೆಯಾಗಿದೆ.

Leave a Reply

Your email address will not be published. Required fields are marked *