ಸುಳ್ಯ:(ಡಿ.27) ಕಾರಿಗೆ ನಕಲಿ ನಂಬರ್ ಪ್ಲೇಟ್ ಹಾಕಿ ಡೀಸೆಲ್ ಹಾಕಿಸಿ ದುಡ್ಡು ಕೊಡದೇ ಕಾರು ಚಾಲಕ ಪರಾರಿಯಾದ ಘಟನೆ ಸುಳ್ಯದ ಪೈಚಾರಿನಲ್ಲಿ ನಡೆದಿದೆ.
ಸುಳ್ಯ ಕಡೆಯಿಂದ ಪೈಚಾರಿನ ಪೆಟ್ರೋಲ್ ಬಂಕ್‌ಗೆ ಬಂದ ಕಾರು ಚಾಲಕ ಬಂಕ್ ಸಿಬ್ಬಂದಿಗೆ 5 ಸಾವಿರ ರೂ.ನ 65 ಲೀಟರ್ ಡೀಸೆಲ್ ಹಾಕಿ ಎಂದಿದ್ದಾನೆ.
ಬಳಿಕ ಚಾಲಕ ಸಿಬ್ಬಂದಿಯಲ್ಲಿ ಒಂದು ಬಾಟಲ್ ನೀಡಿ ಅದರಲ್ಲಿ ಎರಡು ಲೀಟರ್ ಪೆಟ್ರೋಲ್ ತುಂಬಿಸುವಂತೆ ಹೇಳಿದ್ದಾನೆ. ಸಿಬ್ಬಂದಿ ಪೆಟ್ರೋಲ್ ತುಂಬಿಸಲು ಮುಂದಾಗುತ್ತಿದ್ದಂತೆ ಕಾರು ಚಾಲಕ ಕಾರನ್ನು ಅಲ್ಲಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಘಟನೆ ಬಗ್ಗೆ ಬಂಕ್ ಸಿಬ್ಬಂದಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಕಾರಿಗೆ ಹಾಕಲಾಗಿದ್ದ ನಂಬರ್ ಪ್ಲೇಟ್ ಕೂಡ ನಕಲಿ ಅನ್ನೋದು ಗೊತ್ತಾಗಿದೆ.