Wed. Jan 8th, 2025

Mangalore: ಎಚ್ಚರ … ಎಚ್ಚರ… ಎಚ್ಚರ…!! – ಹ್ಯಾಪಿ ನ್ಯೂ ಇಯರ್‌ ವಿಶ್‌ ನ ಮೆಸೇಜ್‌ ಓಪನ್‌ ಮಾಡಿದ್ರೆ ನಿಮ್‌ ಕಥೆ ಅಷ್ಟೇ!!! – ಹ್ಯಾಪಿ ನ್ಯೂ ಇಯರ್‌ ನೆಪದಲ್ಲಿ ವಂಚನೆ ಸಾಧ್ಯತೆ!! – “ಎಪಿಕೆ ಫೈಲ್” ತೆರೆಯದಂತೆ ಸೂಚನೆ

ಮಂಗಳೂರು:(ಡಿ.31) ಹೊಸ ವರ್ಷದ ನೆಪದಲ್ಲಿ ಸೈಬರ್‌ ವಂಚಕರು ವಂಚಿಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರದಿಂದ ಇರುವಂತೆ ಪೋಲಿಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉಜಿರೆ: ಉಜಿರೆಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಇಂದು ಸಂಜೆ ನ್ಯೂ ಇಯರ್ ಪಾರ್ಟಿ

ಹೊಸ ವರ್ಷಕ್ಕೆ ಶುಭಾಶಯ ಕೋರುವ ಲಿಂಕ್‌ ಗಳನ್ನು ಎಪಿಕೆ ಫೈಲ್‌ ಗಳಲ್ಲಿ ಮೊಬೈಲ್‌ ಗೆ ಕಳುಹಿಸಿ ಮೊಬೈಲ್‌ ಹ್ಯಾಕ್‌ ಮಾಡುವ ಸಾಧ್ಯತೆಯಿದೆ.

ಮೊಬೈಲ್‌ ಹ್ಯಾಕ್‌ ಮಾಡಿದ ಬಳಿಕ ಆ ಮೊಬೈಲ್‌ ನಿಂದ ವಾಟ್ಸಾಪ್‌ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್‌ ಮತ್ತು ಎಪಿಕೆ ಫೈಲ್‌ ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್‌ ಮಾಡುವ ಸಾಧ್ಯತೆ ಇರುತ್ತದೆ.

ಸಾರ್ವಜನಿಕರು ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಎಪಿಕೆ ಫೈಲ್‌ ಗಳನ್ನು ವಾಟ್ಸಾಪ್‌ ಸಹಿತ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ಕೂಡಲೇ ಡಿಲೀಟ್‌ ಮಾಡಬೇಕು. ಯಾವುದೇ ಸೈಬರ್‌ ಅಪರಾಧಕ್ಕೆ ಒಳಗಾದರೆ ಕೂಡಲೇ 1930 ಗೆ ಕರೆ ಮಾಡಬೇಕು ಅಥವಾ www.cybercrime.gov.in. ದೂರು ಸಲ್ಲಿಸುವಂತೆ ಪೋಲಿಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *