ಮಂಗಳೂರು :(ಡಿ.31) ದೈವದ ನೇಮ ನಡೆಯುತ್ತಿದ್ದ ವೇಳೆ ವೈದ್ಯನಾಥ ದೈವವು ಭಕ್ತರ ಮೇಲೆ ಕೋಪಗೊಂಡಿದೆ. ಕಾರಣವೇನೆಂದರೆ ಗದ್ದೆಯಲ್ಲಿ ಬಿದ್ದಿದ್ದ ಕಸದ ರಾಶಿ!!
ಇದನ್ನೂ ಓದಿ: ಪುತ್ತೂರು: ಚರಂಡಿ ಮೇಲ್ಭಾಗದ ಪೈಪ್‌ನಲ್ಲಿ ಸಿಲುಕಿದ ಮಹಿಳೆಯ ಕಾಲು!!
ಮಲಯಾಳ ಚಾಮುಂಡಿ ದೈವದ ಕಟ್ಟೆ ಜಾತ್ರೆ ಬುಧವಾರ ನಡೆದಿತ್ತು. ಜೊತೆಗೆ ಮಂಗಳೂರಿನ ಹೊರವಲಯದ ಕೊಲ್ಯ ಕನಿಯಾರು ವಿನಲ್ಲಿ ಕೋಲ ನಡೆಯುತ್ತಿದ್ದು, ಈ ವೇಳೆ ಗದ್ದೆಯಲ್ಲಿದ್ದ ಕಸ-ಕಡ್ಡಿ, ತ್ಯಾಜ್ಯರಾಶಿ ತುಂಬಿದ್ದನ್ನು ಕಂಡು ವೈದ್ಯನಾಥ ದೈವ ಕೋಪಗೊಂಡ ಘಟನೆ ನಡೆದಿದೆ.
ದೈವ ಹೇಳಿದ್ದೇನು?
ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿ ಬಿದ್ದುದನ್ನು ಕಂಡು ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ.
ಹೇಗೆ ಆಗಬೇಕೋ ಹಾಗೆಯೇ ಆಗಬೇಕು. ಹೇಗೋ ಆದರೆ ಆಯ್ತು ಎನ್ನುವುದು ಉಚಿತವಲ್ಲ. ನಾನು ಮಾಯದಲ್ಲಿ ಹೇಗೂ ವಲಸರಿ ಹೋಗುತ್ತೇನೆ. ಎಂಜಲು ತುಳಿದು ಹೋದರೆ ಅದರಿಂದ ಕೇಡುಂಟಾದರೆ ನಿಮಗೆ. ಅದಕ್ಕಾಗಿ ಎಚ್ಚರಿಸುತ್ತೇನೆ ಎಂದು ವೈದ್ಯನಾಥ ದೈವ ಕೋಪದಿಂದ ನುಡಿದಿದೆ. ಸದ್ಯ ಇದರ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.