Wed. Jan 8th, 2025

Puttur: ಚಾಲಕನ ನಿದ್ದೆ ಮಂಪರಿಗೆ ಕಂದಕಕ್ಕೆ ಉರುಳಿದ ಮತ್ತೂಂದು ಕಾರು – 10 ವರ್ಷದ ಬಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ಐವರ ಪ್ರಾಣ!!!

ಪುತ್ತೂರು:(ಜ.2) ಪುತ್ತೂರು ಉಪ್ಪಿನಂಗಡಿ ಹೆದ್ದಾರಿಯ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಕಾರೊಂದು ರಸ್ತೆ ಅಂಚಿನ ಕಂದಕಕ್ಕೆ ಉರುಳಿ ಸಂಪೂರ್ಣ ಜಖಂಗೊಂಡ ಘಟನೆ ಜ 2ರಂದು ಮುಂಜಾನೆ ನಡೆದಿದೆ.

ಇದನ್ನೂ ಓದಿ: ಮಂಗಳೂರು: ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗೆ ದ.ಕ.ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ದಿಢೀರ್ ಭೇಟಿ

ಕಾರಿನಲ್ಲಿದ್ದ 10 ವರ್ಷದ ಬಾಲಕನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಒತ್ತೆಕೋಲದಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ತೆರಳುತ್ತಿದಾಗ ಚಾಲಕ ನಿದ್ದೆ ಮಂಪರಿಗೆ ಒಳಗಾಗಿ ದುರ್ಘಟನೆ ನಡೆದಿದೆ.


ಮಾರುತಿ ಕಾರು ( KA 53 P 4148) ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಚಲಿಸುತ್ತಿದ್ದ ವೇಳೆ, ಸೇಡಿಯಾಪು ಜಂಕ್ಷನ್ ನಿಂದ 250 ಮೀ ದೂರದಲ್ಲಿ ಕಾಪು ಎಂಬಲ್ಲಿ ಎಡ ಬದಿಗೆ ಚಲಿಸಿ ತೋಟದ ನೀರು ಹರಿಯುವ ಕಾಲುವೆಗೆ ಬಿದ್ದಿದೆ. ಕಾರು ಕಾಲುವೆ ಒಳಗೆ ಸಿಕ್ಕಿ ಹಾಕಿ ಕೊಂಡಿದ್ದು ಚಾಲಕನ ಬದಿಯ ಡೋರ್ ಮೇಲ್ಮುಖ ವಾಗಿ ಬಿದ್ದಿದ್ದು, ಸಹ ಚಾಲಕನ ಡೋರ್ ನ ಬದಿ ಮಣ್ಣಿನಡಿಗೆ ಬಿದ್ದಿದೆ .


ಘಟನೆಯೂ ಬೆಳಿಗ್ಗೆ 5.45ರಿಂದ 6 ಗಂಟೆಯ ಸುಮಾರಿಗೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಎಂಬವರು ಕಾರನ್ನು ಚಾಲನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚರಣ್ , ಅವರ ತಂದೆ , ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಮುಂಡೂರಿನಲ್ಲಿ ನಡೆಯುತ್ತಿದ್ದ ಒತ್ತೆ ಕೋಲದಲ್ಲಿ ಭಾಗವಹಿಸಿ ಬರುತ್ತಿದ್ದಾಗ ಘಟನೆ ನಡೆದಿದೆ.


ನಿದ್ದೆ ಮಂಪರಿನಿಂದಾಗಿ ಕಾರು ನಿಯಂತ್ರಣ ತಪ್ಪಿ 10 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ವೇಳೆ ಕಾರಿನಲ್ಲಿದ್ದ ಚರಣ್ ಅವರ ಅಕ್ಕನ ಮಗ 5ನೇ ತರಗತಿ ಓದುತ್ತಿರುವ ವನೀಶ್ ಅಸಾಧರಣ ಸಮಯ ಪ್ರಜ್ಞೆ ಮೆರೆದು, ಕಾರಿನಲ್ಲಿ ತೆವಳಿಕೊಂಡು ಹೋಗಿ ಕಾರಿನ ಡೋರ್ ತೆಗೆದು ಹೊರ ಬಂದಿದ್ದಾನೆ . ಬಳಿಕ ಕಂದಕದಿಂದ ಮೇಲೆ ರಸ್ತೆಗೆ ಬಂದು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಅವರ ಸಹಾಯ ಪಡೆದು ಕಾರಿನಲ್ಲಿದ್ದವರನ್ನು ಮೇಲಕ್ಕೆತ್ತಲು ಸಹಾಯ ಕೇಳಿದ್ದಾನೆ . ಅವರ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *