Wed. Jan 8th, 2025

Brahmavar: ನವ ದಂಪತಿಗಳು ಸಂಚರಿಸುತ್ತಿದ್ದ ಬೈಕ್ ಗೆ ಕಂಟೈನರ್ ಲಾರಿ ಡಿಕ್ಕಿ – ಪತ್ನಿ ಸಾವು!!

ಬ್ರಹ್ಮಾವರ:(ಜ.6) ನವ ದಂಪತಿಗಳು ಸಂಚರಿಸುತ್ತಿದ್ದ ಬೈಕ್’ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಸವಾರನ ಪತ್ನಿ ನಾಗವೇಣಿ (30) ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಶಿಕ್ಷಕಿಯ ಎದುರಲ್ಲೇ ಕುಸಿದು ಬಿದ್ದು 3 ನೇ ತರಗತಿ ವಿದ್ಯಾರ್ಥಿನಿ ಸಾವು!!

ನವ ದಂಪತಿಗಳಾದ ಸತೀಶ (33) ಮೋಟಾರ್‌ ಸೈಕಲ್‌ ನಲ್ಲಿ ಪತ್ನಿ ನಾಗವೇಣಿ (30) ರವರನ್ನು ಸಹಸವಾರಳನ್ನಾಗಿ ಕುಳ್ಳಿರಿಸಿಕೊಂಡು ಬೈಂದೂರಿನಿಂದ ಮಣಿಪಾಲಕ್ಕೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಿದ್ದರು. ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಶೆಟ್ಟಿಗಾರ್‌ ಇಂಡಸ್ಟ್ರೀಸ್‌ ಬಳಿ ತಲುಪುವಾಗ ಹಿಂದುಗಡೆಯಿಂದ ಕಂಟೈನರ್‌ ಲಾರಿಯನ್ನು ಅದರ ಚಾಲಕನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು

ಮೋಟಾರ್‌ ಸೈಕಲಿನ ಬಲ ಹ್ಯಾಂಡಲಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಸಹಸವಾರಳು ಬೈಕ್‌ ಸಮೇತ ರಸ್ತೆಗೆ ಬಿದ್ದಿದ್ದಾರೆ. ಸವಾರನಿಗೆ ಕೈ ಹಾಗೂ ತೊಡೆಯಲ್ಲಿ ಗಾಯ ಹಾಗೂ ಅವರ ಪತ್ನಿ ನಾಗವೇಣಿಯವರಿಗೆ ಮುಖ, ಎಡರಟ್ಟೆ, ತಲೆಗೆ ರಕ್ತಗಾಯವಾಗಿರುವುದಾಗಿದೆ. ಅಪಘಾತಪಡಿಸಿದ ಕಂಟೈನರ್‌ ಲಾರಿ ನಂಬರ್‌ ನೋಡಲಾಗಿ KL-07-DC-6401 ಆಗಿದ್ದು ಅದರ ಚಾಲಕನು ವಾಹನವನ್ನು ನಿಲ್ಲಿಸದೇ ವಾಹನದ ಪರಾರಿಯಾಗಿರುತ್ತಾನೆ.

ಸವಾರರಾದ ಸತೀಶ್ ಹಾಗೂ ನಾಗವೇಣಿಯವರು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಾಗಿದ್ದು , ನಾಗವೇಣಿರವರು ಚಿಕಿತ್ಸೆ ಫಲಕಾರಿಯಾಗದೇವೇಳೆಗೆ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2025 ಕಲಂ: 281, 125 (a), 106 BNS & ಕಲಂ: 134 (a)& (b) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *