ಕಾರ್ಕಳ:(ಜ.6) ಬೈಕ್ ಗೆ ಕಾರು ಡಿಕ್ಕಿಯಾಗಿ ಯುವಕನೋರ್ವ ಸಾವನ್ನಪಿದ ಘಟನೆ ಶಿವಪುರ ಗ್ರಾಮದ ರಾಮ್ ಪುರ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ: ಕಾಸರಗೋಡು: ಕುಂಬ್ಳೆ ಶ್ರೀಧರ ರಾವ್ ಸ್ಮೃತಿಯಲ್ಲಿ ತಾಳಮದ್ದಳೆ, ಯಕ್ಷಗಾನ ಮತ್ತು ಸ್ಮೃತಿ ಗ್ರಂಥ ಬಿಡುಗಡೆ
ಶಿವಪುರ ಮೂರ್ಸಾಲು ನಿವಾಸಿಯಾದ ರಾಹುಲ್ (25) ಮೃತ ಯುವಕ.
ಹೆಬ್ರಿ ಕಡೆಯಿಂದ ಶಿವಪುರ ಹೋಗುತ್ತಿದ್ದ ಕಾರು , ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ.
ಇದರಿಂದ ಗಂಭೀರ ಗಾಯಗೊಂಡ ರಾಹುಲ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮ್ತತಪಟ್ಟಿದ್ದಾನೆ. ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.