ಮಂಗಳೂರು :(ಜ.7) ಲಾರಿ ಮತ್ತು ಬೈಕಿನ ನಡುವೆ ಭೀಕರ ಅಪಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಬಳಿಯ ಕೋಣಾಜೆಯಲ್ಲಿ ನಡೆದಿದೆ.
ಇದನ್ನೂ ಓದಿ: Vishal: ನಡುಗುತ್ತ, ಮಾತನಾಡಲೂ ತಡಬಡಾಯಿಸಿದ ನಟ!!
ಅಸೈಗೋಳಿ ಬಳಿಯ ತಿಪ್ಲಪದವು ಎಂಬಲ್ಲಿ ತಿಪ್ಲಪದವು ಗ್ಯಾರೇಜ್ ಬಳಿಯಿಂದ ರಸ್ತೆಯಲ್ಲಿ ಲಾರಿ ಯುಟರ್ನ್ ಹೊಡೆಯುತ್ತಿದ್ದಾಗ ಅಸೈಗೋಳಿ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಯುವಕ ಮೃತಪಟ್ಟಿದ್ದಾನೆ ಮೃತ ಬೈಕ್ ಸವಾರನನ್ನು ದೇರಳಕಟ್ಟೆ ನಿವಾಸಿ ಜಲೀಲ್ ಮೆಡಿಕಲ್ ಎಂಬವರ ಪುತ್ರ ಅವ್ಸಾಫ್ (25) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಎಂದು ತಿಳಿದು ಬಂದಿದೆ.