Fri. Jan 10th, 2025

Tamil Nadu: ಕೆಎಸ್ಆರ್‌ ಟಿ ಸಿ ಬಸ್ & ಕ್ಯಾಂಟರ್ ನಡುವೆ ಭೀಕರ ಅಪಘಾತ – ಕೋಲಾರ ಮೂಲದ‌ ನಾಲ್ವರು ಸ್ಪಾಟ್ ಡೆತ್!! – 30ಕ್ಕೂ ಹೆಚ್ಚು ಮಂದಿಗೆ ಗಾಯ

ತಮಿಳುನಾಡು:(ಜ.9) ತಮಿಳುನಾಡಿನ ರಾಣಿಪೇಟ್​ನಲ್ಲಿ ಕೆಎಸ್​ಆರ್‌ಟಿಸಿ ಯ ಬಸ್​ಗೆ ಟ್ರಕ್ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಕೋಲಾರ ಮೂಲದವರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಉಜಿರೆ: ಶ್ರೀ ಧ.ಮಂ.ಪ.ಪೂ.ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ವತಿಯಿಂದ

ಮೃತರನ್ನು ಮಂಜುನಾಥನ್​, ಕೃಷ್ಣಪ್ಪ, ಸಂಕರನ್​ ಮತ್ತು ಸೋಮಶೇಖರನ್​ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ರಾಣಿಪೇಟ್​​ ಪೊಲೀಸರು ತಿಳಿಸಿದ್ದಾರೆ.

ಬಸ್​ನ ಮುಂಭಾಗ ಸಂಪೂರ್ಣವಾಗಿ ಜಖಂ ಆಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *