Wed. Jan 15th, 2025

Mogru: ಮುಗೇರಡ್ಕ ಶಿರಾಡಿ ರಾಜನ್ ದೈವದ ನೂತನ ಹುಲಿ ಬಂಡಿ ಮತ್ತು ಪಲ್ಲಕ್ಕಿಯ ಪುರಪ್ರವೇಶ – ಪೆರ್ಲ – ಬೈಪಾಡಿಯಿಂದ ಮುಗೇರಡ್ಕದವರೆಗೆ ವಾಹನ ಜಾಥಾ

ಮೊಗ್ರು :(ಜ.14) ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನಕ್ಕೆ ನೂತನ ಹುಲಿ ಬಂಡಿ ಮತ್ತು ವಳಾಲು ಶ್ರೀ ಕ್ಷೇತ್ರ ಪಡ್ಪು ದೈವಸ್ಥಾನದ ಗ್ರಾಮ ದೈವಗಳಾದ ಶಿರಾಡಿ ರಾಜನ್ ದೈವದ ನೂತನ ಹುಲಿ ಬಂಡಿ ಮತ್ತು ಪಲ್ಲಕ್ಕಿಯ ಪುರಪ್ರವೇಶ ಪ್ರಯುಕ್ತ ಪೆರ್ಲ – ಬೈಪಾಡಿಯಿoದ ಚಾಲನೆಗೊಂಡು,

ಇದನ್ನೂ ಓದಿ: ಉಜಿರೆ: ಬನಶಂಕರಿ ಕ್ರಿಯೇಷನ್ಸ್ ಉಜಿರೆ ಅರ್ಪಿಸುವ “ಲಕ್ಷ್ಮೀ ಜನಾರ್ದನ” ಕನ್ನಡ ಭಕ್ತಿಗೀತೆಯ ಧ್ವನಿ ಸುರುಳಿ ಬಿಡುಗಡೆ

ಶಿವಾಜಿ ಸರ್ಕಲ್ ಶಿವನಗರ – ಕಲ್ಲಮಾಡ – ಊoತನಾಜೆ- ಅಲೆಕ್ಕಿ ಮಾರ್ಗವಾಗಿ ಮುಗೇರಡ್ಕ – ವಳಾಲು ಪಡ್ಪು ಕಡೆಗೆ ಚೆಂಡೆ, ಟಾಸೆ ವಾದ್ಯ, ಸಿಡಿಮದ್ದು ಘೋಷ ವಾಕ್ಯಗಳೊಂದಿಗೆ ಕೇಸರಿ ಧ್ವಜ ರಾರಾಜಿಸುತ್ತ ಜಾಥಾ ಸಾಗಿತು. ಯುವ ಉದ್ಯಮಿಗಳಾದ ಕಿರಣ್ ಚಂದ್ರ. ಡಿ.ಪುಷ್ಪಗಿರಿ ಇವರು ವಾಹನ ಜಾಥಕ್ಕೆ ಚಾಲನೆ ನೀಡಿದರು.


ಮುಗೇರಡ್ಕ ದೈವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನೆರವೇರಿತು, ಶಿರಾಡಿ ದೈವ ಹಿನ್ನಲೆ ಮತ್ತು ಹುಟ್ಟುಕತೆಯ ಬಗ್ಗೆ ಶಶಾಂಕ್ ಶಂಕರ್ ನೆಲ್ಲಿತ್ತಾಯ ಇವರು ತಿಳಿಸಿದರು. ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನ ಆಡಳಿತ ಮೊಕ್ತೇಸರರಾದ ರಾಮಣ್ಣ ಗೌಡ ದೇವಸ್ಯಗುತ್ತು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಯುವ ಉದ್ಯಮಿಗಳಾದ ಕಿರಣ್ ಚಂದ್ರ. ಡಿ.ಪುಷ್ಪಗಿರಿ, ಶ್ರೀ ಕ್ಷೇತ್ರ ಮುಗೇರಡ್ಕ ದೈವಸ್ಥಾನ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ,

ಶ್ರೀ ಕ್ಷೇತ್ರ ವಳಾಲು ಪಡ್ಪು ದೈವಸ್ಥಾನದ ದಾಮೋದರ ಗೌಡ ಶೇಡಿಗುತ್ತು ಪಡ್ಪು , ಬಾರಿಕೆ ರಾಜೇಶ್ ಜೈನ್ ಪಡ್ಪು, ವಸಂತ ಪಿಜಕ್ಕಳ , ವಿಶ್ವನಾಥ ಪೇರಣ ಹಾಗೂ ಮೊಗ್ರು, ಬಜತ್ತೂರು,ಬಂದಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಷ್ಟ ಶಿಲ್ಪಿಗಳಾದ ಬೆಳಾಲು ಶಶಿಧರ್ ಆಚಾರ್ಯ ಮತ್ತು ವಸಂತ ಆಚಾರ್ಯ ಸಹೋದರರಿಗೆ ಗೌರವಾರ್ಪಣೆ ನಡೆಯಿತು.


ಶಿವಾಜಿ ಸರ್ಕಲ್ ಬಳಿ ಶಿವಾಜಿ ಫ್ರೆಂಡ್ಸ್ ವತಿಯಿಂದ ಮಾಲಾರ್ಪನೆ, ಊಂತನಾಜೆ, ಅಲೆಕ್ಕಿಯಲ್ಲಿ ಪುಷ್ಪಾರ್ಚನೆ ಹಾಗೂ ಸಿಹಿತಿಂಡಿ ವಿತರಣೆ, ಮುಗೇರಡ್ಕ ಹಾಗೂ ಪಡ್ಪು ಭೋಜನ ವ್ಯವಸ್ಥೆ ನಡೆಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಜಾಥಾದಲ್ಲಿ ಭಾಗವಹಿಸಿದ್ದರು.


ಮನೋಹರ ಗೌಡ ಅಂತರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ವಳಾಲು ವಸಂತ ಗೌಡ ಪಿಜಕ್ಕಳ ಧನ್ಯವಾದ ಸಲ್ಲಿಸಿ, ಮೊಗ್ರು ಸ.ಕಿ.ಪ್ರಾ. ಶಾಲಾ ಶಿಕ್ಷಕರಾದ ಮಾಧವ ಗೌಡ ಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *