ಉಡುಪಿ:(ಜ.15) ಕುಂದಾಪುರ ಮೂಲದ ಬೋಟ್‌ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ ನಡೆದಿದೆ.
ಇದನ್ನೂ ಓದಿ: ಕಾರ್ಕಳ : ಅಕ್ರಮ ಮರಳು ಸಾಗಾಟದಲ್ಲಿ ಸಿಕ್ಕಿಬಿದ್ದ ಬಿ. ಫಾರ್ಮ್ ವಿದ್ಯಾರ್ಥಿ
ಗಂಗೊಳ್ಳಿಯ ಮೊಮಿನ್ ನಾಜಿಮಾ ಅವರಿಗೆ ಸೇರಿದ ಸೀ ಹಂಟರ್ ಹೆಸರಿನ ಮೀನುಗಾರಿಕೆ ಬೋಟ್ ಮುಳುಗಡೆಯಾಗಿದೆ.
ಜ. 11ರಂದು ತಂಡೇಲ ಯೋಗೀಶ್ ರಾಮಕೃಷ್ಣ ಹರಿಕಾಂತ ಮತ್ತು 7 ಮಂದಿ ಕಲಾಸಿ ಜತೆ ಸೇರಿ ಮೀನುಗಾರಿಕೆಗಾಗಿ ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ನೇರ ಉತ್ತರ ದಿಕ್ಕಿಗೆ ಹೊರಟಿದ್ದು, ಜ. 12ರಂದು ರಾತ್ರಿ ಸುಮಾರು 11.45ರ ಹೊತ್ತಿಗೆ ಕಾರವಾರದ ಮುಂದೆ ಹೋಗುವಾಗ ಬೋಟಿನ ಕೆಳಭಾಗಕ್ಕೆ ಯಾವುದೋ ವಸ್ತು ತಾಗಿದಂತಾಗಿದೆ.
ಸ್ವಲ್ಪ ಹೊತ್ತಿನ ಬಳಿಕ ಬೋಟಿನ ಎದುರು ಬದಿಯ ಸ್ಟೋರೇಜ್‌ನಲ್ಲಿ ನೀರು ಒಳ ಬರಲು ಆರಂಭವಾಗಿದ್ದು, ನೀರು ಖಾಲಿ ಮಾಡಲು ಯತ್ನಿಸಿದರೂ ಸಾಧ್ಯವಾಗದೆ ಬೋಟ್ ಮುಳುಗಡೆಯಾಗಿದೆ.