ಬೆಳ್ತಂಗಡಿ:(ಜ.17) ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಇವುಗಳ ಜಂಟಿ ಆಶ್ರಯದಲ್ಲಿ ದ್ವಿತೀಯ , ತೃತೀಯ ಸೋಪಾನ ಪರೀಕ್ಷೆ ಬರೆಯುವ ಕಬ್ ಬುಲ್ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಶಾಲಾ ಸಂಚಾಲಕರಾದ ಶ್ರೀಯುತ ಅನಂತಪದ್ಮನಾಭ ಭಟ್ ಸ್ಕೌಟ್ ಸಂಸ್ದೆಯ ಸಮಾಜಮಖಿ ಕಾರ್ಯಗಳಿಂದ ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಪರಿಚಯಿಸುತಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಜಿಲ್ಲಾ ಸಹಾಯಕ ಆಯುಕ್ತರಾದ ಶ್ರೀ ಬಿ. ಸೋಮಶೇಖರ್ ಶೆಟ್ಟಿ ಮಾತನಾಡಿ ಸ್ಕೌಟ್ ಮತ್ತು ಗೈಡ್ಸ್ ದೇಹ ಮತ್ತು ಮನಸ್ಸಿನ ಆರೋಗ್ಯಕರ ಬೆಳವಣಿಗೆಗೆ ಪೂರಕ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀಡುತ್ತದೆ.
ವಿದ್ಯಾರ್ಥಿಗಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತದೆ. ಸ್ಕೌಟಿಂಗ್ ಅಂದರೆ ಔಟಿಂಗ್ ,ಅಂದರೆ ತರಗತಿ ಕೋಣೆಯಿಂದ ಹೊರಗೆ ನೀಡುವ ಶಿಕ್ಷಣ ಎಂದರು.
ಪರೀಕ್ಷಾ ತರಬೇತುದಾರರಾಗಿ ಆಗಮಿಸಿದ ಚೇವಾರು ವಿನೋದ್ ಕಾಸರಗೋಡು ನಾಯಕ ತರಬೇತಿದಾರರು ಸ್ಕೌಟ್ , ಕವಿತಾ (ಪ್ರೀ ಎ ಯಲ್ಟಿ ಕಬ್, )ಶ್ರೀಮತಿ ಸೇವಂತಿ ( ಪಿ ಎ ಎಲ್ ಟಿ ಪ್ಲಾಕ್,) ಶ್ರೀ ಪ್ರಸಾದ್ ಆಚಾರ್ಯ (ಪ್ರೀ ಎ ಯಲ್ ಟಿ ಕಬ್)ಆಗಮಿಸಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳ ಎಂ ವಿ ಸಂದರ್ಭೋಚಿತವಾಗಿ ಮಾತನಾಡಿದರು.
ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಗೈಡ್ ಕ್ಯಾಪ್ಟನ್ ಶ್ರೀಮತಿ ಗೀತಾ ಕೆ ಸ್ವಾಗತಿಸಿ ,ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ವಂದನಾರ್ಪಣೆ ಮಾಡಿದರು . ಕಬ್ ಮಾಸ್ಟರ್ ಅಮೃತವಿ ಶೆಟ್ಟಿ ಅತಿಥಿಗಳ ಪರಿಚಯ ಮಾಡಿದರು. ಪ್ಲಾಕ್ ಲೀಡರ್ ಸೌಮ್ಯ ಹಾಗೂ ಕಬ್ ಮಾಸ್ಟರ್ ಹೇಮಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ತರಬೇತಿ ಶಿಬಿರದಲ್ಲಿ ವಾಣಿ ಆಂಗ್ಲ ಮಾಧ್ಯಮ, ಸಂತ ತೆರೇಸಾ ಬೆಳ್ತಂಗಡಿ, ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ, ಸೈಂಟ್ ಮೇರಿಸ್ ಲಾಯಿಲ ಬೆಳ್ತಂಗಡಿ, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿಬಿಎಸ್ಇ ಉಜಿರೆ, ಸರಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಮುಂಡತ್ತೋಡಿ,
ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳ ಶಾಲೆಗಳಿಂದ ಸುಮಾರು ಐನೂರ ಎಪ್ಪತ್ತಾರು ವಿದ್ಯಾರ್ಥಿಗಳು ಹಾಗೂ 25 ಶಿಕ್ಷಕರು ಭಾಗವಹಿಸಿ ಧರ್ಮಸ್ಥಳದಲ್ಲಿ ಸ್ಕೌಟ್ಸ್ ಗೈಡ್ಸ್ ಅನ್ನು ರಾರಾಜಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಆಯೋಜಿಸಿದ ತುಂಬಾ ಒಳ್ಳೆ ಕಾರ್ಯಕ್ರಮವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಯಶಸ್ವಿಗೊಂಡಿತು.