Sat. Jan 18th, 2025

Mangaluru : ಉಳ್ಳಾಲ ಬ್ಯಾಂಕಿನಲ್ಲಿ ದರೋಡೆ ಪ್ರಕರಣ – ಮಹತ್ವದ ಸಂದೇಶ ಹೊರಡಿಸಿದ ಬ್ಯಾಂಕ್ ಅಧ್ಯಕ್ಷ !! – ಏನದು?!

ಮಂಗಳೂರು :(ಜ.18) ಮಂಗಳೂರಿನಲ್ಲಿ ನಿನ್ನೆ ದಿನ ಹಾಡ ಹಗಲೇ ಬ್ಯಾಂಕ್ ದರೋಡೆ ಮಾಡಲಾಗಿದ್ದು ಬ್ಯಾಂಕ್ ಸಿಬ್ಬಂದಿಗೆ ​ಬಂದೂಕು ತೋರಿಸಿದ ಆಗಂತುಕರು ದರೋಡೆ ನಡೆಸಿ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ. ಈ ಬೆನ್ನಲ್ಲೇ ಬ್ಯಾಂಕ್ ತನ್ನ ಗ್ರಾಹಕರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ಇದು ಗ್ರಾಹಕರಿಗೆ ನಿರಾಳವನ್ನುಂಟು ಮಾಡಿದೆ.

ಇದನ್ನೂ ಓದಿ: ಉಜಿರೆ: ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

ಉಳ್ಳಾಲ ತಾಲ್ಲೂಕಿನ ಕೋಟೆಕಾರು ಬ್ಯಾಂಕ್ ಕೆ ಸಿ ರೋಡ್‌ ಶಾಖೆಗೆ ನೀಲಿ ಫಿಯಟ್ ಕಾರಿನಲ್ಲಿ ಆಗಮಿಸಿದ ಐವರು ಖದೀಮರ ತಂಡ ಭಾರೀ ದರೋಡೆ ನಡೆಸಿ ಎಸ್ಕೇಪ್ ಆಗಿದ್ದಾರೆ. ದರೋಡೆಕೋರರು ಬಂದೂಕು ತೋರಿಸಿ ಹಣ ದೋಚಿದ್ದು, ಈ ವೇಳೆ 12 ಕೋಟಿಗೂ ಅಧಿಕ ಹಣ ದರೋಡೆ ಮಾಡಿದ್ದಾರೆ.

ನಾಲ್ಕೈದು ಚೀಲದಲ್ಲಿ ಹಣ ತುಂಬಿಸಿ ದರೋಡೆ ಮಾಡಲಾಗಿದೆ ಎನ್ನಲಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿ ದರೋಡೆಕೋರರು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಬ್ಯಾಂಕಿನಲ್ಲಿ ಠೇವಣಿ ಇಟ್ಟ ಗ್ರಾಹಕರು ಕಂಗಾಲಾಗಿದ್ದರು. ಈ ಕುರಿತಾಗಿ ಬ್ಯಾಂಕ್ ಅಧ್ಯಕ್ಷರು ತನ್ನ ಗ್ರಾಹಕರಿಗೆ ಭರವಸೆಯೊಂದನ್ನು ನೀಡಿದ್ದಾರೆ.

ಬ್ಯಾಂಕ್ ಅಧ್ಯಕ್ಷರು ಹೇಳಿದ್ದೇನು?!
ಈ ಪ್ರಕರಣವಾದ ಬಳಿಕ ಬ್ಯಾಂಕ್​ನಲ್ಲಿ ಠೇವಣಿ ಇಟ್ಟವರು ಹಾಗೂ ಚಿನ್ನ ಅಡವಿಟ್ಟವರು ಆತಂಕಗೊಂಡಿದ್ದಾರೆ. ಠೇವಣಿ ಹಣ ವಾಪಸ್ ಬರುತ್ತೋ ಇಲ್ಲವೋ ಎನ್ನುವ ಆತಂಕದಲ್ಲಿದ್ದರೆ, ಇನ್ನು ಚಿನ್ನ ಗಿರವಿ ಇಟ್ಟ ಮಾಲೀಕರು ಸಹ ಚಿಂತೆ ಮಾಡುತ್ತಿದ್ದಾರೆ.

ಇನ್ನು ಇದೀಗ ಗ್ರಾಹಕರ ಬಗ್ಗೆ ಕೋಟೆಕಾರು ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪ್ರತಿಕ್ರಿಯಿಸಿದ್ದು, 19 ಕೋಟಿಯಷ್ಟು ಇನ್ಸ್ಯೂರೆನ್ಸ್‌ ಇದೆ, ಗ್ರಾಹಕರು ಗಾಬರಿ ಆಗಬೇಕಿಲ್ಲ. ಇನ್ಸ್ಯೂರೆನ್ಸ್‌ ಸಂಸ್ಥೆಯವರು ಎಲ್ಲಾ ಸರಿ ಮಾಡೋಣವೆಂದು ಹೇಳಿ ಹೋಗಿದ್ದಾರೆ. ಗ್ರಾಹಕರಿಗೆ ಅವರ ಮೊತ್ತ ಸಿಗಲಿದೆ ಎಂದು ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *