ಉಜಿರೆ :(ಜ.18) ಈ ಭಾಗದ ಜನರ ಆಯುಷ್ಯ ಹೆಚ್ಚು ಮಾಡುವಲ್ಲಿ ಬೆನಕ ಆಸ್ಪತ್ರೆಯ ಗೋಪಾಲ ಕೃಷ್ಣ ಮತ್ತು ಭಾರತಿ ಅವರು ಕೆಲಸ ಮಾಡುತ್ತಿದ್ದಾರೆ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ ಮತ್ತು ರಜತ ಸಂಭ್ರಮ ಉದ್ಘಾಟಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್
ಮಾತನಾಡಿದರು.
ಇದನ್ನೂ ಓದಿ: ಕಡಬ: ಟೈಲರ್ ಬಳಿ ಹೋಗಿ ಬರುವುದಾಗಿ ಹೇಳಿ ಹೋದ 24 ವರ್ಷದ ಯುವತಿ ನಾಪತ್ತೆ!
ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾಗುತ್ತೆ. ಅಂಥಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲ ಆರೋಗ್ಯ ಸೇವೆಯನ್ನು ಈ ದಂಪತಿ ನೀಡುತ್ತಿದ್ದಾರೆ. ಅದ್ಭುತವಾದ ತುರ್ತು ನಿಗಾ ಘಟಕ ಇದೆ, ಎಲ್ಲವೂ ವ್ಯವಸ್ಥಿತವಾಗಿದೆ ಎಂದರು. 130 ಅಲ್ಲ 500 ಹಾಸಿಗೆಯ ಆಸ್ಪತ್ರೆ ಆಗಲಿ ಎಂದು ಇದೇ ವೇಳೆ ಹಾರೈಸಿದರು.
ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಕಟ್ಟಿದ್ದೀರಾ ಅಂದ್ರೆ ಬಡವರಿಗಾಗಿ ಮಾಡಿದ್ದೀರಾ ಅನ್ನೋದು ಗೊತ್ತಾಗುತ್ತೆ , ಬಡ ಜನರ ಬಗ್ಗೆ ಗಮನ ಇಟ್ಟುಕೊಂಡು ನಿಮ್ಮ ಆಸ್ಪತ್ರೆ ಮುಂದುವರೆಯಲಿ ಎಂದು ಮನವಿ ಮಾಡಿದರು.
ಬಳಿಕ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಕುಟುಂಬದ ಸದಸ್ಯರೆಲ್ಲ ಸೇರಿ ಈ ತಾಲೂಕಿನ ಜನರ ಆರೋಗ್ಯ ಸೇವೆ ಮಾಡುತ್ತಿದ್ದರೆ, ಇದು ನಿಜಕ್ಕೂ ದೊಡ್ಡ ಶ್ಲಾಗಿಸಬೇಕಾದ ಸಾಧನೆ ಎಂದರು. ಗ್ರಾಮೀಣ ಪ್ರದೇಶವಾದಂತಹ ಉಜಿರೆಯಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿ ಕೆಲಸ ಮಾಡುತ್ತಿದ್ದೀರಾ ನಿಮಗೆ ನನ್ನ ಮೊದಲ ಅಭಿನಂದನೆ ಎಂದರು. ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳನ್ನು ಅತ್ಯಂತ ಪ್ರೀತಿ ಇಂದ ನಗು ಮುಖದಿಂದ ನೋಡುತ್ತಾರೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಬೆನಕ ಆಸ್ಪತ್ರೆಯ ಎಂ.ಡಿ. ಡಾ. ಗೋಪಾಲಕೃಷ್ಣ ಸ್ವಾಗತಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಬೆಸ್ಟ್ ಫೌಂಡೇಶನ್ ನಿರ್ದೇಶಕ ರಕ್ಷಿತ್ ಶಿವರಾಮ್ , ಐಎಎಸ್ ಅಧಿಕಾರಿ ನವೀನ್ ಭಟ್ , ಡಾ. ಭಾರತಿ , ಡಾ. ಅಂಕಿತಾ ಭಟ್ , ಡಾ. ರೋಹಿತ್ ಭಟ್ , ಡಾ.ಆದಿತ್ಯ ರಾವ್ , ಉಜಿರೆ ಪಂಚಾಯತ್ ಅಧಕ್ಷೆ ಉಷಾ ಕಾರಂತ್ , ರವಿ ಬರಮೇಲು ಮತ್ತಿತರು ಉಪಸ್ಥಿತರಿದ್ದರು.
ವಿಸ್ತೃತ ಕಟ್ಟಡ ಉದ್ಘಾಟನೆ…!
ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನಡೆಸಿದರು. ನೂತನ ಕಟ್ಟಡದ ಕ್ಯಾಶುವಲ್ಟಿ ವಿಭಾಗ, ಡೇ ಕೇರ್ ವಿಭಾಗ, ಮಕ್ಕಳ ವಿಭಾಗ ಉದ್ಘಾಟನೆಗೊಂಡಿತು.