Wed. Jan 22nd, 2025

Puttur: ಮಗ್ಗಿ ಹೇಳುವಾಗ ತಪ್ಪಿತ್ತೆಂದು ನಾಗರಬೆತ್ತದಿಂದ ವಿದ್ಯಾರ್ಥಿಗೆ ಹೊಡೆದ ಶಿಕ್ಷಕ

ಪುತ್ತೂರು:(ಜ.22) ಮಗ್ಗಿ ಹೇಳುವಾಗ ತಪ್ಪಿತ್ತೆಂದು ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಹೊಡೆದಿರುವ ಘಟನೆ ಪುತ್ತೂರು ತಾಲೂಕು ಪಾಪೆಮಜಲು ಸರಕಾರಿ ಶಾಲೆಯಲ್ಲಿ ನಡೆದಿದೆ. 8 ನೇ ತರಗತಿ ಅತೀಶ್‌ ಹೊಡೆತ ತಿಂದ ವಿದ್ಯಾರ್ಥಿ.

ಇದನ್ನೂ ಓದಿ: ಪದ್ಮುಂಜ: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಮಾರ್ಗದರ್ಶಕರಾಗಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ

ಸಂಜೆ ಸಮಯದಲ್ಲಿ ಅತೀಶ್‌ ತಾಯಿ ಅನಿತಾ ಮತ್ತು ಅಜ್ಜ ರವಿ ಅವರಲ್ಲಿ ಕೈ ನೋವು ವಿಚಾರ ತಿಳಿಸಿ, ಶಾಲೆಯಲ್ಲಿ ನಡೆದ ಘಟನೆಯನ್ನು ಹೇಳಿದ್ದಾನೆ.

ಶಿಕ್ಷಕರು ನಾಗರಬೆತ್ತದಿಂದ ವಿದ್ಯಾರ್ಥಿಗೆ ಹೊಡೆದಿದ್ದು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಬಾಲಕನ ಎಡ ಕೈ ಮೂಳೆಗೆ ಗಾಯವಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯನ್ನು ಅಜ್ಜ ರವಿ ಸರಕಾರಿ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಕೈ ಮೂಳೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಕೈ ಊನಗೊಂಡಿದೆ ಎಂದು ಅಜ್ಜ ರವಿ ಹೇಳಿದ್ದಾರೆ.

Leave a Reply

Your email address will not be published. Required fields are marked *