Shine Shetty:(ಜ.23) ಕನ್ನಡ ಬಿಗ್ ಬಾಸ್ ಸೀಸನ್ 7 ವಿನ್ನರ್ ಶೈನ್ ಶೆಟ್ಟಿ, ಬಿಗ್ ಬಾಸ್ ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಸಹ, ಯಾವುದರಲ್ಲೂ ಹೆಚ್ಚು ಸಕ್ಸಸ್ ಮಾತ್ರ ಸಿಕ್ಕಿಲ್ಲ.
ಇದನ್ನೂ ಓದಿ: ಬಂಟ್ವಾಳ: ಬ್ರಹ್ಮರಕೋಟ್ಲು ಟೋಲ್ ಗೇಟ್ ನಲ್ಲಿ ಕಾರು ಚಾಲಕ ಹಾಗೂ ಟೋಲ್ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ
ಕೆಲವೊಂದು ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯುಸಿಯಾಗಿದ್ದರೂ ಸಹ ಸದ್ಯಕ್ಕೆ ಸಂಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಬಿಡುಗಡೆಯಾದ ಸಿನಿಮಾಗಳು ಯಾವುದೂ ಇಲ್ಲ. ಜಸ್ಟ್ ಮ್ಯಾರೀಡ್ ಸಿನಿಮಾ ತನ್ನ ಟೀಸರ್ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ, ಆದರೆ ಸಿನಿಮಾ ರಿಲೀಸ್ ಆಗೋದಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ.
ಕಳೆದ ಕೆಲವು ತಿಂಗಳಿಂದ ಶೈನ್ ಶೆಟ್ಟಿ ಹಿಮಾಚಲ ಪ್ರದೇಶದಲ್ಲಿ ಬೀಡು ಬಿಟ್ಟಿದ್ದರು. ಹೆಚ್ಚಾಗಿ ಹಿಮಾಲಯದ ತಪ್ಪಲಿನ ಪುಣ್ಯಧಾಮಗಳಿಗೆ ಭೇಟಿ ನೀಡುತ್ತಾ, ಧ್ಯಾನ ಮಾಡುತ್ತಾ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಕುಂಭಮೇಳದಲ್ಲೂ ಶೈನ್ ಶೆಟ್ಟಿ ಹೈಲೈಟ್ ಆಗಿದ್ದರು.
ಸಾಧು ಸನ್ಯಾಸಿಗಳ ಜೊತೆ ಶೈನ್ ಶೆಟ್ಟಿ ತಾವೂ ಕೂಡ ಖಾವಿ ಬಟ್ಟೆ ತೊಟ್ಟು, ಕುತ್ತಿಗೆಗೆ ರುದ್ರಾಕ್ಷಿ ಹಾರ ಧರಿಸಿ, ಕುಂಭಮೇಳದ ಪ್ರದೇಶದಲ್ಲೆಲ್ಲಾ ಓಡಾಡಿದ್ದರು. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಬಂದು ಸಹ ಪುಳಕಿತರಾಗಿದ್ದಾರೆ ಶೈನ್. ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡೀಯೋ ಶೇರ್ ಮಾಡಿರುವ ಶೈನ್ ಶೆಟ್ಟಿ,
ಕುಂಭ ಮೇಳದಲ್ಲಿ ಕಾಣೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳುತ್ತಾರೆ, ನಾನು ಕುಂಭಮೇಳದ ಸೌಂದರ್ಯದಲ್ಲಿ ಕಳೆದು ಹೋದೆ. ನನ್ನನ್ನು ನಾನು ಈ ಮೊದಲು ಕಂಡಿರದ ರೀತಿಯಲ್ಲಿ ಕಂಡುಕೊಂಡೆ ಎಂಬುದಾಗಿ ಕುಂಭಮೇಳದ ದೈವೀಕತೆಯ ಬಗ್ಗೆ ತಿಳಿಸಿದ್ದಾರೆ. ಜನವರಿ 14 ರಂದು ಮಕರ ಸಂಕ್ರಾಂತಿಯ ವೇಳೆ ಶೈನ್ ಶೆಟ್ಟಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಅಲ್ಲಿಯೇ ಹಲವು ದಿನಗಳನ್ನು ಸಹ ಕಳೆದಿದ್ದಾರೆ.