ವಿಟ್ಲ:(ಜ.23) “ಪಂಚಲಿಂಗೇಶ್ವರನನ್ನು ನೆಮ್ಮದಿಯಾಗಿ ರಥದಲ್ಲಿ ಕೂರೋಕೆ ಬಿಡದ ವಿಟ್ಲದ ಡ್ರೋನ್ ಶೂರರು” ಎಂಬ ಬರಹಗಳ ಸಹಿತ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದ ಮೂಲಕ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ: ಸುಳ್ಯ: ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಸುಳ್ಯದ ಯುವಕ ನಾಪತ್ತೆ!!
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಮಹಾರಥೋತ್ಸವದ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಡ್ರೋನ್ ಹಾರಾಟ ನಡೆಸಿ ನಿಯಂತ್ರಣ ಕಳೆದುಕೊಂಡು ದೇವರ ಕಡೆಗೆ ನುಗ್ಗಿದ ಘಟನೆ ನಡೆದಿದೆ.
ತಂತ್ರಿಗಳ ಸಹಾಯಕರಾದ ಮದೂರು ಸಮೂಪದ ಮೊಟ್ಟತ್ತೋಡಿ ಕೃಷ್ಣ ಪ್ರಸಾದ್ ಎಂಬವರು ಡ್ರೋನ್ ದಾಳಿಯಿಂದ ಸ್ವಲ್ಪದರಲ್ಲಿ ಪಾರಾಗಿದ್ದಾರೆ.
ಡ್ರೋನ್ ಅವರ ಮುಖಕ್ಕೆ ಹೊಡೆಯುವ ಹಂತದಲ್ಲಿದ್ದಾಗ ಅವರು ಸಮಯಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾರೆ.
ದೇವಾಲಯದಲ್ಲಿ ಸುತ್ತು ಬಲಿ ನಡೆದ ಬಳಿಕ ರಥದ ಗದ್ದೆಗೆ ಬಂದು ರಥವನ್ನು ದೇವರನ್ನು ಹೊತ್ತವರು ದೇವರ ಸಹಿತ ಏರಿ ಸಭೀಕರತ್ತ ತಿರುಗುತ್ತಿದ್ದಂತೆ, ಡ್ರೋನ್ ಒಂದು ದೇವರ ಕಡೆಗೆ ಹಾರಿ ಬಂದಿದೆ. ದೇವರ ಅಲಂಕಾರದ ಅಟ್ಟೆಯ ಬಲ ಭಾಗಕ್ಕೆ ಹೊಡೆದು, ದೇವರನ್ನು ಹೊತ್ತವರ ಜತೆಗೆ ಇದ್ದವರು ಬಚಾವಾಗಿದ್ದಾರೆ. ರಥ ಏರುವ ಸ್ಥಳದಲ್ಲಿ ಬಿದ್ದ ಡ್ರೋನ್ ಅನ್ನು ಹೊರ ಎಸೆಯಲಾಗಿದೆ. ಸ್ಥಳೀಯರಿಗೆ ಸೇರಿದ ಡ್ರೋನ್ ಎಂದು ಹೇಳಲಾಗಿದೆ.