Sat. Jan 25th, 2025

Hyderabad: ಕ್ಲಾಸ್ ನಡೆಯುವಾಗಲೇ 3ನೇ ಫ್ಲೋರ್ ನಿಂದ ಹಾರಿದ ವಿದ್ಯಾರ್ಥಿ!! – ವಿಡಿಯೋ ವೈರಲ್

ಹೈದರಾಬಾದ್:(ಜ.24) ಆಂಧ್ರಪ್ರದೇಶದ ನಾರಾಯಣ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಕಟ್ಟಡದ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಸೆರೆಹಿಡಿಯುವ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಪುಂಜಾಲಕಟ್ಟೆ: ನಿಶ್ಚಿತಾರ್ಥಗೊಂಡ ಯುವಕ ಆತ್ಮಹತ್ಯೆ ಪ್ರಕರಣ

ಇಂದು ಬೆಳಿಗ್ಗೆ 10.15ಕ್ಕೆ ಕ್ಲಾಸ್ ನಡೆಯುವಾಗಲೇ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಕೊಠಡಿಯಿಂದ ಹೊರಗೆ ಹೋಗಿದ್ದಾನೆ. ಆತ ಹೋಗಿದ್ದನ್ನು ಬೇರೆ ವಿದ್ಯಾರ್ಥಿಗಳು ನೋಡುತ್ತಿದ್ದಂತೆಯೇ ಆತ ಕಾರಿಡಾರಿನ ಕಟ್ಟೆ ಹತ್ತಿ 3ನೇ ಫ್ಲೋರ್​​ನಿಂದ ಕೆಳಗೆ ಹಾರಿದ್ದಾನೆ.

ಇದರಿಂದ ಶಾಕ್ ಆದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊರಗೆ ಬಂದು ನೋಡುವಷ್ಟರಲ್ಲಿ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಆತನ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

Leave a Reply

Your email address will not be published. Required fields are marked *