Sun. Mar 23rd, 2025

Bigg Boss Winner: ಬಿಗ್‌ ಬಾಸ್‌ ಟ್ರೋಫಿ ಗೆದ್ದ ಹಳ್ಳಿ ಹೈದ ಹನುಮಂತ!!

ಬಿಗ್‌ ಬಾಸ್‌ ಕನ್ನಡ 11ರ ವಿನ್ನರ್‌ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ಟ್ರೋಫಿ ಗೆದ್ದ ಖುಷಿಯಲ್ಲಿ ಕಿಚ್ಚ ಸುದೀಪ್‌ ಅವರ ಕಾಲಿಗೆ ಬಿದ್ದು ಹಳ್ಳಿ ಹೈದ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: Mysore: ಥೈಲ್ಯಾಂಡ್‌ ಬ್ಯೂಟಿ ಇಟ್ಕೊಂಡು ಹೈಟೆಕ್‌ ವೇಶ್ಯಾವಾಟಿಕೆ ದಂಧೆ

ಬಿಗ್‌ ಬಾಸ್‌ ಫಿನಾಲೆ ಕೊನೆ ಹಂತ ರೋಚಕತೆಯಿಂದ ಕೂಡಿತ್ತು. ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸುದೀಪ್‌ ತಮ್ಮ ಬಲಭಾಗಕ್ಕೆ ಹನುಮಂತ ಹಾಗೂ ಎಡ ಭಾಗಕ್ಕೆ ತ್ರಿವಿಕ್ರಮ್‌ ನಿಂತಿದ್ದರು.

ಕೊನೆಗೂ ಸುದೀಪ್‌ ಅವರು ಹನುಮಂತನ ಕೈ ಎತ್ತುವ ಮೂಲಕ ವಿನ್ನರ್‌ ಎಂದು ಘೋಷಿಸಿದರು. ಗೆದ್ದ ಖುಷಿಯಲ್ಲಿ ಹನುಮಂತ, ಸುದೀಪ್‌ ಕಾಲಿಗೆ ಬಿದ್ದು ನಮಸ್ಕರಿಸಿದರು. ಇತ್ತ ಹನುಮಂತನ ಫ್ಯಾನ್ಸ್‌ ಸಂಭ್ರಮಾಚರಣೆ ಮಾಡಿದರು.

ಬಿಗ್ ಬಾಸ್ ಸೀಸನ್ ಹನ್ನೊಂದರ ಟ್ರೋಫಿ ಎತ್ತಿದ ಹನುಮಂತನಿಗೆ ಐದೂವರೆ ಕೋಟಿ ಕನ್ನಡಿಗರ ಆಶೀರ್ವಾದ ಸಿಕ್ಕಿದೆ. ಬಿಗ್ ಬಾಸ್ ಶುರುವಾದ ಹದಿನೈದು ದಿನಗಳ ನಂತರ ವೈಲ್ಡ್ ಕಾರ್ಡ್ ಮೂಲಕ ಹನುಮಂತ ಎಂಟ್ರಿ ಕೊಟ್ಟಿದ್ದರು.

ಕನ್ನಡದ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲು. ಈಗ ಹನುಮಂತ 50 ಲಕ್ಷದ ಒಡೆಯನಾಗಿದ್ದಾರೆ. ಜವಾರಿ ಹೈದ ಭಾರೀ ವೋಟ್ ಗಳಿಸಿ ದಾಖಲೆ ಸೃಷ್ಟಿಸಿದ್ದಾರೆ.

Leave a Reply

Your email address will not be published. Required fields are marked *