Sun. Feb 2nd, 2025

Dharmasthala: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ ಮತ್ತು ವಿವರಣೆ ಕಾರ್ಯಕ್ರಮ

ಧರ್ಮಸ್ಥಳ:(ಫೆ.1) ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಜ್ಞಾನ ಸಂಘದ ವತಿಯಿಂದ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ ಮತ್ತು ವಿವರಣೆ ಕಾರ್ಯಕ್ರಮವು ಇಂದು ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆಯಿತು.

ಇದನ್ನೂ ಓದಿ : ಚಿಕ್ಕಮಗಳೂರು: ರಾಜ್ಯದಲ್ಲಿ ಉಳಿದಿದ್ದ ಏಕೈಕ​ ನಕ್ಸಲ್​ ಶರಣಾಗತಿ!!!


ಪುದುವೆಟ್ಟು ಗ್ರಾಮದ ನಾಟಿ ವೈದ್ಯರಾದ ಶ್ರೀಯುತ ನಾರಾಯಣ ಗೌಡ ಮುಚ್ಚಾರು ಇವರು ನಾಟಿ ಔಷಧಿಯ ಬಗ್ಗೆ ಮಕ್ಕಳಿಗೆ ಸವಿವರವಾಗಿ ಕೆಲವು ಔಷಧೀಯ ಸಸ್ಯಗಳನ್ನು ತೋರಿಸುವುದರ ಮೂಲಕ ವಿವರಿಸಿದರು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಕಮಲ್ ತೇಜು ರಜಪೂತ್ ವಹಿಸಿದ್ದರು. ಶ್ರೀಮತಿ ಕಾವ್ಯ ಎಸ್ ನಿರ್ವಹಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ ಉಷಾ ಕುಮಾರಿ ಧನ್ಯವಾದವಿತ್ತರು.

Leave a Reply

Your email address will not be published. Required fields are marked *