Mon. Feb 3rd, 2025

Kanyadi: ಪ್ರಯಾಗ್‌ ರಾಜ್‌ ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ

ಕನ್ಯಾಡಿ:(ಫೆ.1) ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಜ.31 ರಂದು ಪ್ರಯಾಗ್‌ ರಾಜ್‌ ನಲ್ಲಿ ನಡೆದ

ಇದನ್ನೂ ಓದಿ: ಉಜಿರೆ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ

ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕವು ಜುನಾ ಅಖಾಡದ ಮೂಲಕ ನೆರವೇರಿತು. ಇದು ಕರ್ನಾಟಕಕ್ಕೆ ಸಿಕ್ಕಿರುವ ಮೊದಲ ಮಹಾಮಂಡಲೇಶ್ವರ ಪದವಿಯಾಗಿದೆ.

ಕರ್ನಾಟಕದಲ್ಲೇ ಪ್ರಥಮ:

ದಕ್ಷಿಣ ಬಾರತದಲ್ಲಿ ಮಹಾಮಂಡಲೇಶ್ವರ ಪಟ್ಟ ನೀಡಿದ್ದು ವಿರಳ. ಸ್ವಾಮೀಜಿಗಳ ಪೈಕಿ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಸದ್ಗುರು ಶ್ರೀಗಳ ಮೂಲಕ ಕರ್ನಾಟಕಕ್ಕೆ ಬರುವ ಪ್ರಪ್ರಥಮ ಮಹಾಮಂಡಲೇಶ್ವರ ಪದವಿಯಾಗಿದೆ.

ಫೆ.2 ರಂದು ಶ್ರೀಗಳು ಕನ್ಯಾಡಿಗೆ ಆಗಮನ:
ಶ್ರೀಗಳು ಕನ್ಯಾಡಿಗೆ ಫೆ.2 ರಂದು ಆಗಮಿಸಲಿದ್ದು, ಮಾರ್ಚ್‌ ತಿಂಗಳಲ್ಲಿ ಸಾರ್ವಜನಿಕರಿಂದ ಅಭಿನಂದನಾ ಸಮಾರಂಭ ನಡೆಯಲಿದೆ.

Leave a Reply

Your email address will not be published. Required fields are marked *