Mon. Apr 21st, 2025

Byndur: ಅಕ್ರಮವಾಗಿ ಪರವಾನಿಗೆ ಇಲ್ಲದೆ ಬಂಡೆ ಸ್ಪೋಟ- ಇಬ್ಬರ ಬಂಧನ

ಬೈಂದೂರು:(ಫೆ .2) ಬೈಂದೂರು ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅರಮನೆ ಕೊಡ್ಲು ಎಂಬಲ್ಲಿ ಬಂಡೆ ಸ್ಪೋಟಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಅನಂತಮೂರ್ತಿ ಭಟ್ ಮತ್ತು ಪ್ರವೀಣ್ ಬಂಧಿತರು.ಅನಂತಮೂರ್ತಿ ಭಟ್ ಎಂಬುವರ ಜಾಗದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕಲ್ಲು ಬಂಡೆಗಳನ್ನು ಸ್ಪೋಟಿಸಿದ್ದು ,

ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧಸ್ಫೋಟ ನಡೆಸಿದ ಜಾಗದ ಮಾಲೀಕ ಅನಂತಮೂರ್ತಿ ಮತ್ತು ಅವರಿಗೆ ಸಹಕರಿಸಿದ ಪ್ರವೀಣ್ ರನ್ನು ಶಂಕರನಾರಾಯಣ ಪೊಲೀಸ್ ಠಾಣೆ ಪಿಎಸ್ಐ ನಾಸಿರ್ ಹುಸೇನ್ ಹಾಗೂ

ಸಿಬ್ಬಂದಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *