Mon. Feb 3rd, 2025

Belthangady: ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಾರ್ವಜನಿಕ ಸಮಾವೇಶ

ಬೆಳ್ತಂಗಡಿ:(ಫೆ.3) ಕಾಜೂರು ಅತ್ಯಂತ ಪಾವಿತ್ರ್ಯತೆಯ ಜತೆಗೆ ಸೌಹಾರ್ದತೆ ಮತ್ತು ಮಾಹಿತಿಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಭವಿಷ್ಯದ ಜನಾಂಗವನ್ನು ಗುರಿಯಾಗಿಸಿ ಇಂತಹಾ ಕ್ಷೇತ್ರಕ್ಕೆ ಮುಂದಿನ 30 ವರ್ಷಗಳಿಗೆ ಬೇಕಾಗುವ ಮೂಲಸೌಕರ್ಯದ ವಾತಾವರಣ ನಿರ್ಮಿಸುವ ದೂರದೃಷ್ಟಿತ್ವದ ಸಮಗ್ರ ಯೋಜನೆ ಆವಶ್ಯಕವಿದೆ. ಎಲ್ಲವೂ ಒಮ್ಮೆಲೇ ಆಗುವುದಿಲ್ಲ. ಹಂತಹಂತವಾಗಿ ಅನುದಾನ ಒದಗಿಸುವಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಹೇಳಿದರು.

ಇದನ್ನೂ ಓದಿ: ಕಕ್ಕಿಂಜೆ : ಏಕಾಏಕಿ ಹೃದಯಾಘಾತ ಸಂಭವಿಸಿ ಬ್ರೈನ್‌ ಸ್ಟ್ರೋಕ್‌

ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಕೇಂದ್ರ ಕಾಜೂರಿನಲ್ಲಿ ಫೆ.2 ರಂದು ನಡೆದ ಮಖಾಂ ಶರೀಫ್ ಉರೂಸ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.


ಅಭಿವೃದ್ಧಿಯುತ ಬಲಿಷ್ಠ ರಾಷ್ಟ್ರ ನಿರ್ಮಾಣವಾಗಬೇಕಿದೆ. ಸೌಹಾರ್ದಯುತ ವಾತಾವರಣ ನಿರ್ಮಿಸುವುದೇ ನನ್ನ ರಾಜಕೀಯ ಉದ್ದೇಶ. ನನ್ನ ಕನಸಿನ ದೇಶ ಎಲ್ಲ ಜಾತಿ, ಧರ್ಮದ ಮಕ್ಕಳು ಕೈ ಕೈ ಹಿಡಿದು ಹೋಗುವ ದೊಡ್ಡ ಮಟ್ಟದ ಮನೋಭಾವ ಸೃಷ್ಟಿಸಬೇಕಿದೆ. ಸಮಾಜ ಕಟ್ಟುವ ಕೆಲಸವಾಗಬೇಕೆ ಹೊರತು ಬಿಕ್ಕಟ್ಟಿಗೆ ಸಿಲುಕಿಸುವವರಾಗಬಾರದು. ಸಮಸ್ಯೆ ಇಲ್ಲದ ಕುಟುಂಬವಿಲ್ಲ ದೇಶವಿಲ್ಲ. ಇದಕ್ಕೆ ಧಾರ್ಮಿಕ, ಲೌಖಿಕ ಶಿಕ್ಷಣದ ಅವಶ್ಯವಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಮಾತನಾಡಿ,15 ಎಕ್ರೆ ಪ್ರದೇಶದಲ್ಲಿರುವ ಕಾಜೂರು ಕ್ಷೇತ್ರಕ್ಕೆ ರಾಜ್ಯ ಗಡಿನಾಡು, ಹೊರ ಜಿಲ್ಲೆಗಳಿಂದಲೂ ಲಕ್ಷೋಪಲಕ್ಷ ಭಕ್ತರು ಬರುವ ಅತ್ಯಂತ ಪವಿತ್ರ ಕ್ಷೇತ್ರ. ಇಲ್ಲಿಗೆ ಬರುವ ಎಲ್ಲ ಭಕ್ತರಿಗೆ ಅನುಕೂಲಕ್ಕಾಗಿ 15 ಕೋಟಿಯ ಮಾಸ್ಟರ್ ಪ್ಲಾನರಿ ನೀಡಬೇಕು. ಯು.ಟಿ ಖಾದರ್ ಅವರು 144 ವರ್ಷಕ್ಕೊಮ್ಮೆ ಬರುವ ಮಹಾ ಕುಂಭಮೇಳದಲ್ಲಿ ಭಾಗವಹಿಸುವ ಮೂಲಕ ಭಾರತ ದೇಶದಾದ್ಯಂತ ಭಾತೃತ್ವವನ್ನು ಹಂಚುತ್ತಿದ್ದೀರಿ. ಈ ಮೂಲಕ ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿಸುವಲ್ಲಿ ಪ್ರತಿನಿಧಿಯಾಗಿದ್ದೀರಿ ಎಂದು ಹೇಳಿದರು.

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಳ್ ಸ‌ಅದಿ ಮತ್ತು ವಿದ್ವಾಂಸ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಧಾರ್ಮಿಕ ಸಂದೇಶ ನೀಡಿದರು.

ಕೇಂದ್ರ ಮುಶಾವರ ಸದಸ್ಯ ಕೆ.ಯು ಉಮರ್ ಸಖಾಫಿ ಕಾಜೂರು, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಯುವ ಉದ್ಯಮಿ ಲೆತೀಫ್ ಗುರುಪುರ, ಮಾಜಿ ಸಚಿವ ಬಿ ರಮಾನಾಥ ರೈ, ರಾಜ್ಯ ಗುಪ್ತಚರ ಇಲಾಖೆಯ ಹೆಡ್ ಕಾನ್ಸ್‌ಟೇಬಲ್ ಪಿ.ಎಮ್ ಅಶ್ರಫ್ ಸರಳಿಕಟ್ಟೆ, ಹೆಡ್ ಕಾನ್ಸ್‌ಟೇಬಲ್ ಸಲೀಂ, ಮಾಜಿ ಶಾಸಕ ಮೊಯಿದಿನ್ ಬಾವಾ, ಮುಹಮ್ಮದ್ ತೌಸೀಫ್ ಸ‌ಅದಿ ಹರೇಕಳ, ಶಂಶೀರ್ ಸಖಾಫಿ ಪರಪ್ಪು, ಯು.ಕೆ ಮುಹಮ್ಮದ್ ಹನೀಫ್ ಉಜಿರೆ, ಡಾ‌. ಝುಲ್ಫಿಕರ್ ಅಹಮದ್ ಮಂಗಳೂರು, ಆರ್‌ ಆರ್‌ ಆರ್ ಅಬ್ದುಲ್ ರಹಿಮಾನ್ ಹಾಜಿ, ಮುಸ್ತಫಾ ರೂಬಿ, ಅಬ್ದುಲ್‌ ಕರೀಂ ಗೇರುಕಟ್ಟೆ, ಆನಂದ ಮೈರ್ನೋಡಿ, ತುಂಗಪ್ಪ ಪೂಜಾರಿ, ನಾಗೇಶ್ ಕುಮಾರ್, ಉದಯ ಸುವರ್ಣ, ವಝೀರ್ ಬಂಗಾಡಿ, ಸಾದಿಕ್ ಮಲೆಬೆಟ್ಟು, ಗುಲಾಮ್ ಮುಹಮ್ಮದ್ ಕನ್ನಂಗಾರ್, ಅಝೀಝ್ ಬೈಕಂಪಾಡಿ, ಕೃಷ್ಣಪ್ಪ ಪೂಜಾರಿ, ಚಂದ್ರಶೇಖರ, ನೂರುದ್ದೀನ್ ಸಾಲ್ಮರ, ಶಾಫಿ ಮೂಳರಪಟ್ಣ, ಅಬೂಬಕ್ಕರ್ ಸಿದ್ದೀಕ್ ಮೊಂಟುಗೊಳಿ, ಶುಕೂರ್ ಉಜಿರೆ, ಕಬೀರ್ ಕಾಜೂರು, ಕೆ.ಯು. ಮುಹಮ್ಮದ್, ಝುಬೈರ್ ಸುಪ್ರಿಂ ಗುರುವಾಯನಕೆರೆ, ಅಲಿ ತುರ್ಕಳಿಕೆ, ಎಂ.ಎ ಕಾಸಿಂ ಮಲ್ಲಿಗೆಮನೆ, ಹೆಚ್ ಮುಹಮ್ಮದ್ ವೇಣೂರು, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದು ಸ್ವಾಗತಿಸಿದರು.
ಉರೂಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು,‌ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕೆ.ಎಮ್ ಕಮಾಲ್ ಕಾಜೂರು, ಜೊತೆ ಕಾರ್ಯದರ್ಶಿ ಶಾಹುಲ್ ಹಮೀದ್ ಕಿಲ್ಲೂರು, ಕಾಜೂರು ಆಡಳಿತ ಸಮಿತಿ ಉಪಾಧ್ಯಕ್ಷ ಬದ್ರುದ್ದೀನ್ ಕಾಜೂರು,‌ ಕಿಲ್ಲೂರು ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆಮನೆ ಸಹಿತ ಕಾಜೂರಿನ ಎಲ್ಲ ಪೂರ್ವಾಧ್ಯಕ್ಷರುಗಳು ಭಾಗಿಯಾಗಿದ್ದರು.

ಸಭಾಪತಿ ಯು.ಟಿ ಖಾದರ್, ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್‌ಶಿವರಾಂ, ಮಾಜಿ ಸಚಿವ ಬಿ ರಮಾನಾಥ ರೈ, ವಕ್ಫ್ ಜಿಲ್ಲಾಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರಿಗೆ ಅಭಿನಂದನೆ‌ ಸಲ್ಲಿಸಲಾಯಿತು.
ಎಸ್ಸೆಸ್ಸೆಫ್ ಸಾಹಿತ್ಯೋತ್ಸವ ಸ್ಪರ್ಧೆಗಳಲ್ಲಿ ಸ್ಥಾನ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಫ್ ಕಾಜೂರು ಸೆಕ್ಟರ್ ವತಿಯಿಂದ ಪುರಸ್ಕರಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನಡೆಯಿತು.

ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು ವಂದಿಸಿದರು.

Leave a Reply

Your email address will not be published. Required fields are marked *