ಬೆಂಗಳೂರು:(ಫೆ.3) ವಿಧವೆ ಎಂದು ಬಾಳು ನೀಡಿದ ಕಾನ್ಸ್ಟೇಬಲ್ ವಿರುದ್ಧವೇ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಉಪ್ಪಿನoಗಡಿ: ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘ (ನಿ.) ಆಡಳಿತ ಮಂಡಳಿ ಚುನಾವಣೆಯಲ್ಲಿ
2016 ರಲ್ಲಿ ಮಹಿಳೆಯ ಪತಿ ಕೊಲೆಯಾಗಿದ್ದ. ಈ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪತಿಯ ಕೇಸ್ ಸಲುವಾಗಿ ಆರೋಪಿಗಳಿಗೆ ಸಮನ್ಸ್ ಜಾರಿಯಾಗಿತ್ತು. 2019 ರಲ್ಲಿ ಸಮನ್ಸ್ ಕಾಪಿ ಕೊಡಲು ಶೇಷಾದ್ರಿಪುರಂ ಠಾಣೆಗೆ ಮಹಿಳೆ ತೆರಳಿದ್ದರು. ಆಗ ಕಾನ್ಸ್ಟೇಬಲ್ ಮನೋಜ್ ಆಕೆಯ ನಂಬರ್ ಕೇಳಿ ಆಕೆಯ ಜೊತೆ ಸಲುಗೆ ಬೆಳೆಸಿಕೊಂಡು, ಸಲುಗೆ ಪ್ರೀತಿಯಾಗಿ ನಂತರ 2024ರ ನ.28 ರಂದು ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಅಲ್ಲದೇ ಮದುವೆಯಾಗಿ ತನ್ನ ಕ್ವಾಟ್ರಸ್‌ಗೆ ಮಹಿಳೆಯನ್ನ ಮನೋಜ್ ಕರೆತಂದಿದ್ದ. ಆಗ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು.



ಕೆಲ ದಿನದ ನಂತರ ಯಾವಾಗಲೂ ಮೊಬೈಲ್‌ನಲ್ಲಿ ಪತಿ ಮನೋಜ್ ಬ್ಯುಸಿಯಾಗಿರುವುದನ್ನು . ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಗಂಡನ ವರ್ತನೆ ನೋಡಿ ಮನೋಜ್ ಮೊಬೈಲ್ ಚೆಕ್ ಮಾಡಿದಾಗ ಬೇರೆ ಮಹಿಳೆಯರ ಜೊತೆಗಿದ್ದ ವೀಡಿಯೋ, ಫೋಟೊಗಳು ಮೊಬೈಲ್‌ನಲ್ಲಿ ಪತ್ತೆಯಾಗಿವೆ. ಈ ಕಾರಣಕ್ಕೆ ಶೇಷಾದ್ರಿಪುರಂ ಠಾಣೆಯ ಕಾನ್ಸ್ಟೇಬಲ್ ಮನೋಜ್ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
