Wed. Feb 5th, 2025

ಉಳ್ಳಾಲ:(ಫೆ.5) ಪೊಲೀಸ್‌ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿ ಕಳುವಾಗಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಸರ್ಕಾರಿ ಕೆಲ್ಸದಾಸೆಗೆ ಗಂಡನನ್ನೇ ಕೊಂದ ಪತ್ನಿ?!!!

ಠಾಣೆಯ ಪಿಎಸ್‌ಐ ಧನರಾಜ್‌ ಎಸ್‌ ಎಂಬುವವರು ರಾತ್ರಿ ರೌಂಡ್ಸ್‌ ಕರ್ತವ್ಯಕ್ಕೆ ಹೊರಡುವಾಗ ವಾಕಿಟಾಕಿಗೆ ಚಾರ್ಜ್‌ ಇಲ್ಲದ ಕಾರಣ ಡಿಜಿಟಲ್‌ ವಾಕಿಟಾಕಿಯನ್ನು ಕೊಂಡೋಗಿದ್ದರು.

ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಲ್ಲಾಪು ಬಳಿ, ಜನರು ಗುಂಪು ಸೇರಿದ್ದನ್ನು ಗಮನಿಸಿದ್ದು, ಪಿಎಸ್‌ಐ ಜೀಪ್‌ ನಿಲ್ಲಿಸಿ, ವಾಕಿಟಾಕಿಯನ್ನು ಸೀಟ್‌ನಲ್ಲಿಟ್ಟಿದ್ದಾರೆ. ಸೇರಿದ ಜನರನ್ನು ಚದುರಿಸಿ ವಾಪಾಸು ಬಂದು ನೋಡಿದಾಗ ವಾಕಿಟಾಕಿ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *