Thu. Feb 6th, 2025

Belthangady: ಫೆ.9ರಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವತಿಯಿಂದ 1000 ಯುವಕ-ಯುವತಿಯರಿಂದ ಭತ್ತ ಕಟಾವು

ಬೆಳ್ತಂಗಡಿ :(ಪೆ.6) ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ವತಿಯಿಂದ ಫೆ.9ರಂದು ಬೆಳಾಲಿನ ಅನಂತೋಡಿಯ ಅನಂತ ಪದ್ಮನಾಭ ದೇವಸ್ಥಾನದ ಬಳಿಯಲ್ಲಿರುವ 5 ಎಕರೆ ಗದ್ದೆಯಲ್ಲಿ 1000ಕ್ಕೂ ಹೆಚ್ಚು ಯುವಕ ಮತ್ತು ಯುವತಿಯರಿಂದ ಭತ್ತ ಕಟಾವು ಕಾರ್ಯಕ್ರಮ ಫೆ.9 ರಂದು ನಡೆಯಲಿದೆ.

ಇದನ್ನೂ ಓದಿ: ಕಲ್ಮಂಜ: ಪಜಿರಡ್ಕ ದೇವಸ್ಥಾನಕ್ಕೆ ಉಜಿರೆ ಕನಸಿನ ಮನೆ ಲಕ್ಷ್ಮಿ ಇಂಡಸ್ಟ್ರೀಸ್ ಮಾಲಕರಾದ ಶ್ರೀ ಮೋಹನ್ ಕುಮಾರ್ ಭೇಟಿ

ಈ ಹಿನ್ನೆಲೆ, ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರು ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಈ ವೇಳೆ ಬೆಳ್ತಂಗಡಿ ಪತ್ರಕರ್ತ ಸಂಘದ ಅಧ್ಯಕ್ಷರಾದ ಪ್ರಸಾದ್, ಯು ಪ್ಲಸ್ ಟಿವಿಯ ಮುಖ್ಯಸ್ಥ ದಿನೇಶ್ ಕೋಟ್ಯಾನ್ ಮತ್ತಿತರು ಜೊತೆಗಿದ್ದರು.


ಕತ್ತಿ, ಮುಟ್ಟಾಳೆ ರೆಡಿ…!
ಫೆ. 9 ರಂದು 1000ಕ್ಕೂ ಹೆಚ್ಚು ಯುವಕ-ಯುವತಿಯರು ಗದ್ದೆಗೆ ಇಳಿದು ರೈತರಂತೆ ಭತ್ತ ಕಟಾವು ಮಾಡಲಿದ್ದಾರೆ. ಈಗಾಗಲೇ ಭತ್ತ ಕಟಾವಿಗೆ ಬೇಕಾದ 1000 ಪರ್ದ ಕತ್ತಿಗಳು ತಯಾರಾಗಿದೆ. ಅಲ್ಲದೇ ಕಟಾವು ಮಾಡಿದ ಭತ್ತವನ್ನು ದೇವಸ್ಥಾನದ ಅಂಗಳಕ್ಕೆ ತರಲು ಈಗಾಗಲೇ 1000 ಮುಟ್ಟಾಳೆ ಕೂಡ ರೆಡಿಯಾಗಿದೆ.

Leave a Reply

Your email address will not be published. Required fields are marked *