ಬೆಂಗಳೂರು:(ಫೆ.6) ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದನ್ನು ಯಾವ ಮಟ್ಟಿಗೆ ಸಂಭ್ರಮಿಸಿದ್ದಾನೆ ಎಂದರೆ ಆಕೆ ತವರಿಗೆ ಹೋಗಿರುವ ವಿಚಾರ ಇದೀಗ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ.
![](https://uplustv.com/wp-content/uploads/2025/02/WhatsApp-Image-2024-10-18-at-11.21.38_8ae796c7-1-667x1024.jpg)
ಇದನ್ನೂ ಓದಿ: ಸುಬ್ರಮಣ್ಯ: ಅನುಮಾನಾಸ್ಪದವಾಗಿ ಮನೆಯಂಗಳಕ್ಕೆ ಬಂದ ಅಪರಿಚಿತರು
ಅದು ಹೇಗೆ ಅಂತೀರಾ? ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಡಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ.
ಈ ವಿಡಿಯೋವನ್ನು ಆತನ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ “ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ” ಎಂದು ಬರೆಯಲಾಗಿದೆ.
![](https://uplustv.com/wp-content/uploads/2025/02/51b5a0cd-f9b6-499f-a45b-f15e5ee2ea78-1-1024x1024.jpg)
ನೆಟಿಜನ್‌ಗಳು ಇದನ್ನು ‘ಸ್ವಾತಂತ್ರ್ಯ’ ಎಂದು ಕರೆದಿದ್ದಾರೆ. ಆ ವ್ಯಕ್ತಿ ತಮ್ಮ ಆಟೋದಲ್ಲಿ ಪ್ರಯಾಣಿಸುವವರಿಗೆ ಬ್ರಿಟಾನಿಯಾ ಮಿಲ್ಕ್ ಬಿಕಿಸ್‌ಗಳನ್ನು ವಿತರಿಸಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಕೆಲವರು ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.
![](https://uplustv.com/wp-content/uploads/2025/02/057b1d26-13c1-450b-9ca4-33b6e7226863-1-810x1024.jpg)
![](https://uplustv.com/wp-content/uploads/2025/02/muli-1.jpg)
![](https://uplustv.com/wp-content/uploads/2025/02/u-plus-poster-1.jpg)
ಇನ್ನು ಕೆಲವರು ತಮಾಷೆಯಾಗಿ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, “ನೀವು ಅವನ ಜೀವನವನ್ನೇ ಹಾಳುಮಾಡಿದ್ದೀರಿ. ಪಾಪ ಆತ ಹೆಂಡತಿಯಿಲ್ಲದೆ ಸಂತೋಷವಾಗಿದ್ದ. ಈಗ ನಿಮ್ಮಿಂದ ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಷಯ ಅವನ ಹೆಂಡತಿಗೆ ಅವನು ಆಟೋದಲ್ಲಿಯೇ ಪರ್ಮನೆಂಟಾಗಿ ಮಲಗಬೇಕಾಗುತ್ತದೆ” ಎಂದು ಕಮೆಂಟ್ ಮಾಡಿದ್ದಾರೆ.
![](https://uplustv.com/wp-content/uploads/2025/02/WhatsApp-Image-2024-07-12-at-16.54.12_23b03a5a-1.jpg)