Thu. Feb 6th, 2025

Bihar: ಪ್ರೀತಿಸಿ ಮದುವೆಯಾದ ಕೆಲವೇ ಕ್ಷಣಗಳಲ್ಲಿ ಪತ್ನಿಗೆ ಕಪಾಳಮೋಕ್ಷ ಮಾಡಿದ ಗಂಡ – ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಾ??!

ಬಿಹಾರ:(ಫೆ.6) ಮದುವೆಯಲ್ಲಿ ತಾಳಿ ಕಟ್ಟಿದ ಬಳಿಕ ವಧು ವರರು ಬಹಳ ಖುಷಿ ಖುಷಿಯಾಗಿ ನವ ಜೀವನಕ್ಕೆ ಕಾಲಿಡುತ್ತಾರೆ. ಅದರಲ್ಲೂ ಪ್ರೀತಿಸಿ ವಿವಾಹವಾದವರ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಆದ್ರೆ ಇಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರೀತಿಸಿ ವಿವಾಹವಾದ ಕೆಲವೇ ಹೊತ್ತಲ್ಲೇ ಪೊಲೀಸಪ್ಪ ನವವಧು ಅಂದ್ರೆ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿ ಹೈ ಡ್ರಾಮ ಸೃಷ್ಟಿಸಿದ್ದಾನೆ.

ಇದನ್ನೂ ಓದಿ: ಬೆಳ್ತಂಗಡಿ : ಸರಿಯಾದ ದಾಖಲೆಗಳಿಲ್ಲದೆ ಕಬ್ಬಿಣದ ಗುಜರಿ ಸಾಗಾಟ

ಈ ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದು, ಆದ್ರೆ ಸ್ವಲ್ಪ ಹೊತ್ತಲ್ಲೇ ಆತ ಹೆಂಡತಿಯ ಮೇಲೆ ಕೈ ಮಾಡಿದ್ದಾನೆ. ಪತಿಯ ವಿರುದ್ಧ ವಧು ಠಾಣೆಯ ಮೆಟ್ಟಿಲೇರಿದ್ದು, ದೂರಿನ ಆಧಾರದ ಮೇಲೆ ಹೆಂಡ್ತಿಗೆ ಕಪಾಳಮೋಕ್ಷ ಮಾಡಿದ ಪೊಲೀಸ್‌ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಲಾಗಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಬಿಹಾರದ ನವಾಡದಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್‌ ಇನ್ಸ್‌ಪೆಕ್ಟರ್‌ ಮದುವೆಯಾದ ಕೆಲವೇ ಹೊತ್ತಲ್ಲೇ ತನ್ನ ಪತ್ನಿಯ ಕೆನ್ನೆಗೆ ಬಾರಿಸಿ ಹೈಡ್ರಾಮ ಸೃಷ್ಟಿಸಿದ್ದಾನೆ. ಮಾಹಿತಿಯ ಪ್ರಕಾರ, ಒಂದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಮುಂಗೇರ್‌ನ ಧರ್ಹರ ಗ್ರಾಮದ ಸಬ್ ಇನ್ಸ್‌ಪೆಕ್ಟರ್ ಸಚಿನ್ ಕುಮಾರ್ ಮತ್ತು ಕತಿಹಾರ್‌ನ ಕುರ್ಸೇಲಾದ ಮಹಿಳಾ ಕಾನ್‌ಸ್ಟೆಬಲ್ ದೇವಸ್ಥಾನದಲ್ಲಿ ಸರಳವಾಗಿ ಪ್ರೇಮ ವಿವಾಹ ಆಗಿದ್ದಾರೆ.

ಆದ್ರೆ ಅದೇನಾಯ್ತೋ ಗೊತ್ತಿಲ್ಲ, ವಿವಾಹ ನೆರವೇರಿದ ಕೆಲವೇ ಹೊತ್ತಿಗೆ ದೇವಸ್ಥಾನದಲ್ಲಿಯೇ ಪೊಲೀಸ್‌ ಇನ್ಸ್‌ಪೆಕ್ಟರ್‌ ತನ್ನ ಪತ್ನಿಯ ಕಪಾಳಕ್ಕೆ ಬಾರಿಸಿ ದೊಡ್ಡ ರಂಪಾಟ ಸೃಷ್ಟಿಸಿದ್ದಾನೆ. ಈ ಬಗ್ಗೆ ವಧು ಅಂದ್ರೆ ಮಹಿಳಾ ಕಾನ್‌ಸ್ಟೆಬಲ್‌ ದೂರನ್ನು ದಾಖಲಿಸಿದ್ದು, ಆಕೆಯ ದೂರಿನ ಮೇರೆಗೆ ಎಸ್‌ಪಿ ಅಭಿನವ್ ಧಿಮಾನ್ ತಕ್ಷಣ ಪತ್ನಿಯ ಕಪಾಳಕ್ಕೆ ಬಾರಿಸಿದ ಇನ್ಸ್‌ಪೆಕ್ಟರನ್ನು ಅಮಾನತುಗೊಳಿಸಿದ್ದಾರೆ.

Leave a Reply

Your email address will not be published. Required fields are marked *