ಮಿತ್ತಬಾಗಿಲು:(ಫೆ.8) ಕಾಡುಹಂದಿಯನ್ನು ಯಾವುದೋ ಆಯುಧಗಳಿಂದ ದಾಳಿ ಮಾಡಿ ಸಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಂಟ್ವಾಳ: ಫ್ಯಾನ್ ರಿಪೇರಿ ಮಾಡುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಮೃತ್ಯು!!
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ತೋಟದಲ್ಲಿ ಒಂದು ವರ್ಷ ಪ್ರಾಯದ 26 ಕೆ.ಜಿ ತೂಕದ ಕಾಡು ಹಂದಿಯನ್ನು ಜ.23 ರಂದು ಜಾನು ಗೌಡ ಎಂಬಾತ ಆಯುಧದಿಂದ ದಾಳಿ ಮಾಡಿ ಸಾವಿಗೆ ಕಾರಣನಾಗಿದ್ದನು. ಈ ಘಟನೆ ಬಗ್ಗೆ ಸ್ಥಳೀಯರು ಬೆಳ್ತಂಗಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದರು.
ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್.ಎಫ್.ಓ ತ್ಯಾಗರಾಜ್ ಮತ್ತು ತಂಡ ಜ.23 ರಂದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದರು. ಬೆಳ್ತಂಗಡಿ ಗೋ ಮತ್ತು ಪಶು ಇಲಾಖೆಯ ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ವರದಿ ಕೇಳಿದ್ದರು.



ಈ ಬಗ್ಗೆ ಪಶು ವೈದ್ಯರು ಜ.26 ರಂದು ಅಯುಧದಿಂದ ಗಾಯಗೊಳಿಸಿ ಸಾಯಿಸಿರುವುದಾಗಿ ವರದಿ ನೀಡಿದ್ದು, ಅದರಂತೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಆರೋಪಿ ಮಿತ್ತಬಾಗಿಲು ಗ್ರಾಮದ ಹೊಸಬೆಟ್ಟು ನಿವಾಸಿ ಬಾಬು ಗೌಡರ ಮಗ ಜಾನು ಗೌಡ ವಿರುದ್ಧ ಜ.27 ರಂದು ಅರಣ್ಯ ಕಾಯ್ದೆ 9,39,51 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

