ಪುತ್ತೂರು:(ಫೆ.8) ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿಯಾದ ಘಟನೆ ಕನ್ಯಾನ-ಕುಳಾಲು-ಸಾಲೆತ್ತೂರು ಸಂಪರ್ಕದ ಕಳೆಂಜಿಮಲೆ ರಕ್ಷಿತಾರಣ್ಯದ ಒಳರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ: ಚಿಕ್ಕೋಡಿ: ಗಂಡನಿದ್ದರೂ ಮತ್ತೊಬ್ಬನ ಜೊತೆ ನಂಟು
ತಮಿಳುನಾಡು ನೋಂದಣಿಯ ಪಿಕಪ್ ಟೆಂಪೋ ಇದಾಗಿದ್ದು, ಕನ್ಯಾನ ಜಂಕ್ಷನ್ ನಿಂದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಹಾದುಹೋಗುವ ತೀರಾ ಕಡಿದಾದ ಏರು ರಸ್ತೆಯಲ್ಲಿ,


ಮುಂದಿನಿಂದ ಬರುತ್ತಿದ್ದ ಇನ್ನೊಂದು ವಾಹನಕ್ಕೆ ಸೈಡ್ ಕೊಡುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ರಸ್ತೆ ಬದಿಗೆ ಪಲ್ಟಿಯಾಗಿದೆ. ವಾಹನದಲ್ಲಿದ್ದ ಕೋಳಿಗಳಲ್ಲಿ ಕೆಲವು ಸಾವನ್ನಪ್ಪಿದ್ದು, ಸ್ಥಳೀಯರು ಕೋಳಿಗಳನ್ನು ಹೊತ್ತೊಯ್ದಿದ್ದಾರೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.


