ಸಕಲೇಶಪುರ:(ಫೆ.12) ಸಕಲೇಶಪುರದಲ್ಲಿ ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು ಫೆ. 14 ರಂದು ಪುತ್ಥಳಿ ಅನಾವರಣವನ್ನು ಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿಗಳ ದಿವ್ಯ ಹಸ್ತದಲ್ಲಿ ಉದ್ಘಾಟನೆ ಆಗಲಿದೆ.

ಇದನ್ನೂ ಓದಿ: ವಿಜಯಪುರ: ಭೀಮಾತೀರದಲ್ಲಿ ಮತ್ತೆ ರಕ್ತದೋಕುಳಿ
ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸಕಲೇಶಪುರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು, ಸಮಾಜದಿಂದ ಸಂಗ್ರಹ ಮಾಡಿದ ಹಣ ಉಳಿಸಿ 5555 ಐದು ಸಾವಿರದ ಐದುನೂರ ಐವತ್ತೈದು ರೂಪಾಯಿಗಳನ್ನು ನೀಡಲಾಗಿದೆ ಎಂದು ಸಂಚಾಲಕ ಪ್ರದೀಪ್ ತಿಳಿಸಿದ್ದಾರೆ.




ಹಾಸನ ಜಿಲ್ಲಾ ಆದಿಚುಂಚನಗಿರಿ ಮಠದ ಸ್ವಾಮೀಜಿಗಳು ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಗಳು, ಒಕ್ಕಲಿಗ ಸಂಘದ ಅಧ್ಯಕ್ಷರಾದ ವಿಶ್ವನಾಥ, ಕಾರ್ಯದರ್ಶಿ ಮರಗುತ್ತೂರು ಉಮೇಶ್ ಸರ್ವ ಸದಸ್ಯರು ಇದ್ದರು.
