ಮೊಗ್ರು :(ಫೆ.14) ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಅಲೆಕ್ಕಿ–ಮುಗೇರಡ್ಕ, ಮೊಗ್ರು, ಬೆಳ್ತಂಗಡಿ ಇದರ 25 ನೇ ವರ್ಷದ ರಜತ ಪಥ ಕಾರ್ಯಕ್ರಮದ ಪ್ರಯುಕ್ತ ಅಲೆಕ್ಕಿ ಶ್ರೀರಾಮ ಶಿಶುಮಂದಿರ ಮೈದಾನದಲ್ಲಿ ಇಂದು 14 ಫೆಬ್ರವರಿ ಶುಕ್ರವಾರ ಸಂಜೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ವಿದ್ಯುತ್ ದೀಪಾಲoಕೃತಗೊಂಡ ಭವ್ಯ ರಂಗಮಂಟಪದಲ್ಲಿ ಸೇವಾ ಬಯಲಾಟವಾಗಿ ಆಡಿತೋರಿಸಲಿದ್ದಾರೆ.



ಇದನ್ನೂ ಓದಿ: ಮಂಗಳೂರು : ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್
ಸಂಜೆ 6.00 ಗಂಟೆಗೆ ಸರಿಯಾಗಿ ಚೌಕಿ ಪೂಜೆ, ಹಾಗೂ ರಾತ್ರಿ 7.00 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಭಕ್ತಾಭಿಮಾನಿಗ ಳು ಹಾಗೂ ಕಲಾಭಿಮಾನಿಗಳು ಆಗಮಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಬೇಕೆಂದು ಯಕ್ಷಗಾನ ಬಯಲಾಟ ಸೇವಾಕರ್ತರಾದ ಶ್ರೀಮತಿ ಉಮ್ಮಕ್ಕ, ಶ್ರೀಮತಿ ಲೀಲಾವತಿ ಮತ್ತು ಪುರುಷೋತ್ತಮ ಗೌಡ,ಮಾ| ಮಿಲನ್, ಕು| ಯತಿದೇವಿ ಪುಣ್ಕೆತಡಿ ಮನೆ ಹಾಗೂ


ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್, ಬೆಳ್ಳಿ ಹಬ್ಬ ಸಮಿತಿ, ಮಹಿಳಾ ಸಂಘ, ಮಾತೃ ಮಂಡಳಿ, ಮಾತಾಜಿಯವರು, ಇದರ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
