ನಡ :(ಫೆ.15) ಅಭಿವೃದ್ಧಿ ಪಥದಲ್ಲಿರುವ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇದರ ನೂತನ ಸಲಹಾ ಸಮಿತಿಯ ಪ್ರಧಾನ ಸಲಹೆಗಾರರಾಗಿ ಪಿ.ಎ ಇನಿಯರಿಂಗ್ ಕಾಲೇಜ್ ಇದರ ನಿರ್ದೇಶಕರು,

ಇದನ್ನೂ ಓದಿ: Sullia: ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕ ತಂದೆ
ಸೆಂಟರ್ ಫಾರ್ ಮ್ಯಾನೇಜ್ಮೆಂಟ್ ಮತ್ತು ರಿಸರ್ಚ್, ಹಾಗೂ ಪಿ.ಎ.ಇ.ಟಿ ಸಮೂಹ ಸಂಸ್ಥೆಗಳ ಮುಖ್ಯ ಅಧಿಕಾರಿಯಾಗಿರುವ ಶ್ರೀಯುತ ಡಾ. ಸಯ್ಯದ್ ಅಮೀನ್ ಅಹಮದ್ ಇವರು ಅಧಿಕಾರ ಸ್ವೀಕಾರ ಮಾಡಿದರು.

ಈ ಪದ ಗ್ರಹಣದ ಸಂದರ್ಭದಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರಾದ ಶ್ರೀಯುತ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, ಶಾಲಾ ಆಡಳಿತ ಟ್ರಸ್ಟಿನ ಸದಸ್ಯರುಗಳಾದ ಶ್ರೀಯುತ ಶೇಕ್ ಅಹಮದ್ ಮಂಗಳೂರು,



ಡಾಕ್ಟರ್ ಸರೀನಾ ಶೇಕ್ ಮಂಗಳೂರು, ಕಾರ್ಯದರ್ಶಿಯಾದ ಶ್ರೀಯುತ ಸಯ್ಯದ್ ಮಹಮ್ಮದ್ ಆಯುಬ್, ಕೋಶಾಧಿಕಾರಿಯಾಗಿ ಶ್ರೀಯುತ ಸಯ್ಯದ್ ಮಹಮ್ಮದ್ ಇರ್ಫಾನ್ ಹಾಗೂ ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಉಪಸ್ಥಿತರಿದ್ದು ಇವರ ಅಧಿಕಾರಾವಧಿಯಲ್ಲಿ ಶಾಲೆಯು ಇನ್ನಷ್ಟು ಅಭಿವೃದ್ಧಿ ಕಾಣಲಿ ಎಂದು ಶ್ರೀಯುತರನ್ನು ಅಭಿನಂದಿಸಲಾಯಿತು.
