ಬೆಳ್ಳಾರೆ:(ಫೆ.15) ತಂದೆಯಾದವನು ಮಗಳನ್ನು ರಕ್ಷಣೆ ಮಾಡಬೇಕು ಹೊರತು ಆತನೇ ತನ್ನ ಮಗಳ ಮೇಲೆ ಎರಗುವುದು ಎಷ್ಟು ಸರಿ. ಇತ್ತೀಚಿನ ದಿನಗಳಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ಮಾಡಿ , ಆಕೆಯನ್ನು ಗರ್ಭಿಣಿ ಮಾಡಿದ ಪ್ರಕರಣಗಳೇ ಹೆಚ್ಚು. ಅಂತಹದ್ದೇ ಒಂದು ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಇದನ್ನೂ ಓದಿ: ಮಡಿಕೇರಿ: ಮಡಿಕೇರಿಯಲ್ಲಿ ಗಾಲಿಕುರ್ಚಿ ಜಾಥಾ
ಕೊಳ್ತಿಗೆ ಗ್ರಾಮದಲ್ಲಿ ತಂದೆಯೇ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಲೈಂಗಿಕ ದೌರ್ಜನ್ಯದ ಕುರಿತು ಯುವತಿಯ ತಾಯಿಯೇ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.

ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
