ಧರ್ಮಸ್ಥಳ:(ಫೆ.18) ಅಲ್ಪಕಾಲದ ಅಸೌಖ್ಯದಿಂದ ವ್ಯಕ್ತಿಯೋರ್ವರು ಫೆ.17 ರಂದು ಮೃತಪಟ್ಟ ಘಟನೆ ನಾರ್ಯದ ಕಾಣಮೇರುವಿನಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ: ಕಲಾಪೋಷಕ ಟಿ.ಶಾಮ್ ಭಟ್ ಇವರಿಗೆ “ಯಕ್ಷಭಾರತಿ” ದಶಮಾನೋತ್ಸವ ಗೌರವ
ಪ್ರಶಾಂತ್ ಗೌಡ (25 ವ) ಮೃತ ವ್ಯಕ್ತಿ.



ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡ ಪ್ರಶಾಂತ್ ರವರನ್ನು ತಕ್ಷಣ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಸಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

