ಸುರತ್ಕಲ್ :(ಫೆ.18) ಮದುವೆ ಸಮಾರಂಭದ ಸಮಯದಲ್ಲಿ ಓಡಾಟ ಮಾಡಲೆಂದು ಟೊಯೊಟಾ ಫಾರ್ಚುನರ್ ಕಾರನ್ನು ನೀಡಿದ ಸ್ನೇಹಿತನೊಬ್ಬನಿಗೆ ಆತನ ಕಾರನ್ನು ಮಾರಿ ಮೋಸ ಮಾಡಿದ ಘಟನೆಯೊಂದು ನಡೆದಿದೆ. ಟೊಯೊಟಾ ಫಾರ್ಚುನರ್ ಕಾರನ್ನು ಪಡೆದ ವ್ಯಕ್ತಿ ಅದನ್ನು ಬೇರೊಬ್ಬರಿಗೆ ಮಾರಾಟ ಮಾಡಿದ ಘಟನೆಯ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗೋವಾದಲ್ಲಿ ಐರಿಷ್ ಯುವತಿಯ ರೇಪ್& ಮರ್ಡರ್ ಕೇಸ್
ತನ್ನ ಸೋದರ ಸಂಬಂಧಿ ಮಹಮ್ಮದ್ ಇಕ್ಬಾಲ್ ಅವರ ಟೊಯೊಟಾ ಫಾರ್ಚುನರ್ ಕಾರನ್ನು ಪರಿಚಯದವರಾದ ಉಚ್ಚಿಲ ನಿವಾಸಿ ಮಕ್ಯೂಮ್ ಎಂಬಾತ ತನ್ನ ತಂಗಿಯ ಮದುವೆ ಕಾರ್ಯಕ್ರಮದ ಸಲುವಾಗಿ ಓಡಾಟಕ್ಕೆಂದು ಕೊಂಡೊಯ್ದಿದ್ದ. 10 ದಿನಗಳಲ್ಲಿ ಕಾರನ್ನು ಮರಳಿ ನೀಡುವುದಾಗಿ ತಿಳಿಸಿದ್ದ. ನಂತರ ಕಾರನ್ನು ಮರಳಿಸಿಲ್ಲ ಎಂದು ಇಡ್ಯಾದ ಅಬ್ದುಲ್ ಸಮೀರ್ ದೂರನ್ನು ನೀಡಿರುವ ಕುರಿತು ಪೊಲೀಸರು ಮಾಹಿತಿ ನೀಡಿರುವ ಕುರಿತು ವರದಿಯಾಗಿದೆ.



ಕಾರಿನ ಕುರಿತು ಪ್ರಶ್ನೆ ಮಾಡಿದಾಗ ಅದನ್ನು ಮೈಸೂರಿನ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಅದನ್ನು ಖರೀದಿಸಿದ ವ್ಯಕ್ತಿ ನಕಲಿ ದಾಖಲಾತಿಗಳನ್ನು ತಯಾರಿಸಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ ಎಂದು ಅಬ್ದುಲ್ ಸಮೀರ್ ದೂರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

