ಉಡುಪಿ(ಫೆ.18): ಎರಡು ದ್ವಿಚಕ್ರವಾಹನಗಳ ನಡುವೆ ಭೀಕರ ರಸ್ತೆ ಅಪಘಾತ ನಡೆದ ಘಟನೆ ಅಜ್ಜರಕಾಡು ಅಗ್ನಿ ಶಾಮಕ ದಳ ಠಾಣೆಯ ಸಮೀಪ ನಡೆದಿದೆ.

ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಸ್ಯಾಮುಯೆಲ್ ಸದಾನಂದ ಕರ್ಕಡ(59ವ) ಎಂದು ಗುರುತಿಸಲಾಗಿದೆ.


ಅತೀ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.


ಅಪಘಾತದಿಂದ ಎರಡು ಬೈಕ್ ಗಳು ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
