ಬೆಳ್ತಂಗಡಿ:(ಫೆ.21) ಇಲ್ಲಿನ ತಾಲೂಕು ಸಾರ್ವಜನಿಕ ಆಸ್ಪತ್ರೆ ಅಂಬ್ಯುಲೆನ್ಸ್ ಚಾಲಕನಾಗಿ ಹಾಗೂ ತಾಲೂಕು ಆರೋಗ್ಯಾಧಿಕಾರಿ ವಾಹನ ಚಾಲಕನಾಗಿ ಸುಮಾರು 26 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಅಬ್ದುಲ್ ರಝಾಕ್ ಅವರಿಗೆ ವಿದಾಯ ಕೂಟ ಕಾರ್ಯಕ್ರಮ ಫೆ. 19 ರಂದು ತಾಲೂಕು ಆರೋಗ್ಯಾಧಿಕಾರಿ ಕಛೇರಿಯಲ್ಲಿ ನಡೆಯಿತು.

ಇದನ್ನೂ ಓದಿ: ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಯುವಕ-ಯುವತಿ ಶವ ಸಿಕ್ಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಈ ಕಾರ್ಯಕ್ರಮದಲ್ಲಿ ತಾ. ಆರೋಗ್ಯಾಧಿಕಾರಿ ಡಾ. ಸಂಜತ್, ನಿವೃತ್ತ ತಾ. ಆರೋಗ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿ, ಬಂಟ್ವಾಳ ಮತ್ತು ಸುಳ್ಯದ ತಾಲೂಕು ಆರೋಗ್ಯಾಧಿಕಾರಿ ಭಾಗವಹಿಸಿ ನಿವೃತ್ತರ ಸೇವೆಯ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯಾಧಿಕಾರಿ, ಕಚೇರಿ ಸಿಬ್ಬಂದಿಗಳು, ಎಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅಬ್ದುಲ್ ರಝಾಕ್ ಅವರ ವೃತ್ತಿ ಬದುಕಿನಲ್ಲಿ ಅವರ ಸೌಮ್ಯ ಸ್ವಭಾವ, ಕರ್ತವ್ಯ ನಿಷ್ಠೆ, ಸಮಯಪ್ರಜ್ಞೆ, ಅಪಘಾತ ರಹಿತ ಉತ್ತಮ ಚಾಲನೆಯ ಸೇವೆಯನ್ನು ಪ್ರಶಂಸಿಸಿ ಶಾಲು, ಫಲಪುಷ್ಪ ನೀಡಿ ದಂಪತಿ ಸಮೇತ ಗೌರವಿಸಲಾಯಿತು.
ಅಜಯ್ ಕಲ್ಲೇಗ ಕಾರ್ಯಕ್ರಮ ನಿರೂಪಿಸಿದರು.



