ಉಜಿರೆ:(ಫೆ.21) ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಕಾಶಿಬೆಟ್ಟು ಬಳಿ ಫೆ.21 ರಂದು ಬೆಳಿಗ್ಗೆ ನಡೆದಿದೆ.

ಇದನ್ನೂ ಓದಿ: ☪️ಗುರುವಾಯನಕೆರೆ: ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ
ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಬೈಕ್ ಸವಾರ ಅಳದಂಗಡಿ ನಿವಾಸಿ ಸುರೇಂದ್ರ ಬಲ್ಯಾಯಕೋಡಿ ಎಂದು ತಿಳಿದು ಬಂದಿದೆ. ಕೂಡಲೇ ಬೈಕ್ ಸವಾರ ಸುರೇಂದ್ರರವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.



ಅಳದಂಗಡಿಯಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಚಿಕ್ಕಮಗಳೂರು ನಿಂದ ಮೂಡಬಿದ್ರೆಗೆ ಬರುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ.

