ಬೆಳ್ತಂಗಡಿ:(ಫೆ.22) ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ – ದುಂಬೆಟ್ಟು ರಸ್ತೆಯಲ್ಲಿ ಮೆಸ್ಕಾಂ ಇಲಾಖೆಯ ಹೈ ಪವರ್ ಲೈನ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದಾಗಲೇ ತಂತಿ ತುಂಡಾಗಿ ಬೈಕಿನಲ್ಲಿ ಹೋಗುತ್ತಿದ್ದ ಯುವಕರ ಮೇಲೆ ಬಿದ್ದಿದೆ.

ಘಟನೆಯಲ್ಲಿ ಬೈಕ್ ಸವಾರರಾದ ಮಂಜುನಾಥ, ಆದರ್ಶ ಎಂಬವರಿಗೆ ಕರೆಂಟ್ ಶಾಕ್ ಹೊಡೆದು ರೋಡ್‌ಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯುವಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದು ಮೆಸ್ಕಾಂ ಇಲಾಖೆಯ ಬೇಜಾವಬ್ದಾರಿತನವೋ ಅಥವಾ ಕರೆಂಟ್ ಬಿಲ್ ಫ್ರೀ ಎನ್ನೋ ಘೋಷಣೆಯೋ??? ಇನ್ನೂ ತಿಳಿದು ಬಂದಿಲ್ಲ. ಇನ್ನಾದರೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸೋದು ಉತ್ತಮ. ಇಲ್ಲದಿದ್ದರೆ , ಈಗ ಸಣ್ಣ ಪುಟ್ಟ ಗಾಯಗಳಾಗಿವೆ, ಇನ್ನೂ ಗಮನಹರಿಸದಿದ್ದರೆ, ದೊಡ್ಡ ದುರಂತವೇ ನಡೆದುಹೋಗಬಹುದು.



